ಬೆಂಗಳೂರು: ಹನಿಟ್ರ್ಯಾಪ್ ಮಾಡಿ ಯುವಕನ ಸುಲಿಗೆ ಮಾಡಿದ್ದ ಅಪ್ರಾಪ್ತೆ, ವಿದ್ಯಾರ್ಥಿ ಸೇರಿದಂತೆ ಆರು ಮಂದಿಯನ್ನು ಬನ್ನೇರುಘಟ್ಟ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಬಸವನಗುಡಿಯ ಖಾಸಗಿ ಕಾಲೇಜಿನ ಬಿಕಾಂ ವಿದ್ಯಾರ್ಥಿ ರಿತಿಕ್(23), ಜೆಪಿ ನಗರದ ಮಹಮ್ಮದ್ ಆಸಿಫ್(220, ತುಮಕೂರಿನ ಯಾಸಿನ್ ಪಾಷಾ(20), ಆವಲಹಳ್ಳಿ ಬಿಡಿಎ ಲೇಔಟ್ ನ ಮಹಮ್ಮದ್ ಶಾಹಿದ್ ಅಲಿ(23), ಜೆಪಿ ನಗರದ ಸಮೀರ್(21) ಬಂಧಿತ ಆರೋಪಿಗಳು. ಪ್ರಕರಣದಲ್ಲಿ ಭಾಗಿಯಾಗಿದ್ದ ಅಪ್ರಾಪ್ತೆಯನ್ನು ಬಾಲಾಪರಾಧಿ ವಿಭಾಗಕ್ಕೆ ಕಳುಹಿಸಲಾಗಿದೆ.
ಇನ್ ಸ್ಟಾಗ್ರಾಂ ನಲ್ಲಿ ಬಾಲಕಿಯ ಮೂಲಕ ಜೆಪಿ ನಗರದ ಶಶಾಂಕ್ ಎಂಬುವನಿಗೆ ಗಾಳ ಹಾಕಿ ಹನಿಟ್ರ್ಯಾಪ್ ಬಲೆಗೆ ಬೀಳಿಸಿಕೊಂಡಿದ್ದಾರೆ. ಜನವರಿ 12ರಂದು ಬಾಲಕಿ ಕರೆದ ಕಾರಣ ಶಶಾಂಕ್ ಬನ್ನೇರುಘಟ್ಟದ ಹಕ್ಕಿಪಿಕ್ಕಿ ಕಾಲೋನಿ ಸಮೀಪ ಬಂಡೆ ಬಳಿಗೆ ಹೋಗಿದ್ದಾನೆ. ಇಬ್ಬರೂ ಜೊತೆಯಾಗಿದ್ದ ಸಂದರ್ಭದಲ್ಲಿ ಆರೋಪಿಗಳು ದಾಳಿ ಮಾಡಿ ಬೆದರಿಸಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಶಶಾಂಕ್ ಬಳಿ ಇದ್ದ ಐಫೋನ್, ಚಿನ್ನದ ಸರ, ಉಂಗುರಗಳನ್ನು ಕಸಿದು ಸುಲಿಗೆ ಮಾಡಿದ್ದಾರೆ. ಬನ್ನೇರುಘಟ್ಟ ಠಾಣೆ ಪೊಲೀಸರಿಗೆ ಪ್ರಶಾಂತ್ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಐಫೋನ್, ಸರ, ಉಂಗುರಗಳನ್ನು ಜಪ್ತಿ ಮಾಡಲಾಗಿದೆ.