ಮಂಡ್ಯ: ಕಂದೇಗಾಲದಲ್ಲಿ ಹೆಜ್ಜೇನು ದಾಳಿಗೆ ರೈತರೊಬ್ಬರು ಬಲಿಯಾಗಿರುವ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ನಡೆದಿದೆ.
ಕಂದೇಗಾಲ ಗ್ರಾಮದಲ್ಲಿ ಹೆಜ್ಜೇನು ದಾಳಿ ಮಾಡಿದ್ದು, ಹೆಜ್ಜೇನು ದಾಳಿಯಲ್ಲಿ ರೈತ ನಿಂಗೇಗೌಡ (65) ಗಂಭೀರವಾಗಿ ಗಾಯಗೊಂಡಿದ್ದರು. ರೇಷೆ ಸೊಪ್ಪು ಕ್ಟಾವು ವೇಳೆ ನಿಂಗೇಗೌಡ ಮೇಲೆ ಹೆಜ್ಜೇನು ದಾಳಿ ಮಾಡಿದೆ.
ತೀವ್ರವಾಗಿ ಅಸ್ವಸ್ಥಗೊಂಡಿದ್ದ ನಿಂಗೇಗೌಡ ಅವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ನಿಂಗೇಗೌಡ ಸಾವನ್ನಪ್ಪಿದ್ದಾರೆ.