ಪ್ರತಿ ನೋಟಿನಲ್ಲಿ ಮಹಾತ್ಮ ಗಾಂಧೀಜಿ ಫೋಟೋ ಇರುವುದನ್ನ ನೀವು ನೋಡಿದ್ದೀರ. ಇದನ್ನು ಗಮನಿಸಿದರೆ ಎಲ್ಲಾ ನೋಟುಗಳ ಮೇಲೆ ಗಾಂಧೀಜಿ ನಗುತ್ತಿರುವ ಫೋಟೋ ಕಾಣಿಸುತ್ತದೆ. ಇದಕ್ಕೆ ಸಂಬಂಧಿಸಿದಂತೆ ಅಸಾಂಪ್ರದಾಯಿಕ ಪರೀಕ್ಷೆಯಲ್ಲಿ ಶಿಕ್ಷಕರು ಪ್ರಶ್ನೆಯೊಂದನ್ನು ಕೇಳಿದ್ದು ವಿದ್ಯಾರ್ಥಿ ನೀಡಿರುವ ಉತ್ತರ ಹಾಸ್ಯಮಯವಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.
ಪರೀಕ್ಷೆಯಲ್ಲಿ “ಪ್ರತಿ ನೋಟಿನಲ್ಲಿ ಗಾಂಧೀಜಿ ಏಕೆ ನಗುತ್ತಿರುತ್ತಾರೆ?” ಎಂದು ಪ್ರಶ್ನೆ ಕೇಳಿದ್ದು ಅದಕ್ಕೆ ವಿದ್ಯಾರ್ಥಿಯು “ಏಕೆಂದರೆ ಅವರು ಅಳುತ್ತಿದ್ದರೆ ನೋಟು ಒದ್ದೆಯಾಗುತ್ತದೆ!” ಎಂದು ಉತ್ತರಿಸಿದ್ದಾನೆ. ಈ ಉತ್ತರಕ್ಕೆ ಶಿಕ್ಷಕರು ವಿದ್ಯಾರ್ಥಿಗೆ 10 ಕ್ಕೆ 10 ಅಂಕಗಳನ್ನು ನೀಡಿದ್ದಾರೆ. ವಿದ್ಯಾರ್ಥಿಯ ಉತ್ತರ ಪತ್ರಿಕೆಯ ಫೋಟೋದೊಂದಿಗೆ ಈ ವಿಡಿಯೋವನ್ನು ಇನ್ಟಾ10ಗ್ರಾಂ ರೀಲ್ ನಲ್ಲಿ ಹಂಚಿಕೊಂಡಿದ್ದು ಇಂಟರ್ನೆಟ್ ನಲ್ಲಿ ವ್ಯಾಪಕ ಗಮನ ಸೆಳೆದಿದೆ.
ಆದಾಗ್ಯೂ, ಪೋಸ್ಟ್ ನ ಸತ್ಯಾಸತ್ಯತೆ ಪ್ರಶ್ನಾರ್ಹವಾಗಿ ಉಳಿದಿದ್ದು ಮನರಂಜನೆಯ ಉದ್ದೇಶಗಳಿಗಾಗಿ ಅಂತರ್ಜಾಲದಲ್ಲಿ ಇಂತಹ ಮೀಮ್ ಸೃಷ್ಟಿಸಿ ವೈರಲ್ ಮಾಡಲಾಗುತ್ತೆ ಎಂದು ಕೆಲವರು ಹೇಳಿದ್ದಾರೆ.