ಪ್ರಾಮಾಣಿಕವಾಗಿ ಕಾಲಕಾಲಕ್ಕೆ ತೆರಿಗೆ ಕಟ್ಟಿಕೊಂಡು ಬರುತ್ತಿರುವ ತೆರಿಗೆದಾರರನ್ನು ಶ್ಲಾಘಿಸಬೇಕೆಂದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಅನೇಕ ಸುಧಾರಣೆಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತರುತ್ತಿರುವ ಆದಾಯ ತೆರಿಗೆ ಇಲಾಖೆಗೂ ಸಹ ಮೆಚ್ಚುಗೆ ಸೂಚಿಸಿದ್ದಾರೆ.
ಆದಾಯ ತೆರಿಗೆಯ 161ನೇ ವಾರ್ಷಿಕ ದಿನಾಚರಣೆಯ ಪ್ರಯುಕ್ತ ಇಲಾಖೆಗೆ ಸಂದೇಶ ಕಳುಹಿಸಿದ ಸೀತಾರಾಮನ್ ತೆರಿಗೆ ಸಂಗ್ರಹದ ಪ್ರಕ್ರಿಯೆಗಳನ್ನು ಸರಳೀಕರಣಗೊಳಿಸುವತ್ತ ಇಲಾಖೆ ಮಾಡುತ್ತಿರುವ ಯತ್ನಗಳನ್ನು ಶ್ಲಾಘಿಸಿದ್ದು, ತೆರಿಗೆ ಪಾವತಿಯನ್ನು ಅಡಚಣೆ ಮುಕ್ತವಾಗಿ, ಪಾರದರ್ಶಕವಾಗಿ ಮಾಡಿರುವುದಕ್ಕೆ ಶ್ಲಾಘಿಸಿದ್ದಾರೆ.
“ತಮ್ಮ ಪಾಲಿನ ತೆರಿಗೆಗಳನ್ನು ಪ್ರಾಮಾಣಿಕವಾಗಿ ಪಾವತಿ ಮಾಡುವ ಮೂಲಕ ಪ್ರಾಮಾಣಿಕ ತೆರಿಗೆ ಪಾವತಿದಾರರು ದೇಶದ ಅಭಿವೃದ್ಧಿಗೆ ತಮ್ಮ ಕೊಡುಗೆ ನೀಡುತ್ತಿದ್ದಾರೆ ಎಂದು ಸಚಿವರು ಶ್ಲಾಘಿಸಿದ್ದಾರೆ. ಸಾಂಕ್ರಾಮಿಕ ಸಂಕಟದ ನಡುವೆಯೂ ತಮ್ಮ ಕರ್ತವ್ಯಗಳನ್ನು ಪಾಲನೆ ಮಾಡುತ್ತಿರುವ ತೆರಿಗೆದಾರರನ್ನು ಸಚಿವರು ಶ್ಲಾಘಿಸಿದ್ದಾರೆ” ಎಂದು ಸಚಿವಾಲಯದ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.