ನವದೆಹಲಿ: ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಈ ವರ್ಷ ದೀಪಾವಳಿಗೂ ಮುನ್ನ ಮೂರು ಹೊಸ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಲಿದೆ. ಮೂರು ಹೊಸ ಮಾದರಿಗಳಲ್ಲಿ 125 ಸಿಸಿ ಸ್ಕೂಟರ್ ಮತ್ತು 160 ಸಿಸಿ ಮೋಟಾರ್ಸೈಕಲ್ ಬಿಡುಗಡೆಯಾಗಲಿವೆ.
ಈ ಕುರಿತು ಹೋಂಡಾ ಮೋಟಾರ್ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಮತ್ತು ಸಿಇಒ ಅತ್ಸುಶಿ ಒಗಾಟಾ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈ ಹೊಸ ಸ್ಕೂಟರ್ಗಳು ಮೂರನೇ ಹೊಸ ಮಾದರಿಯು 350 ಸಿಸಿ ಮೋಟಾರ್ಸೈಕಲ್ ಆಗಿದ್ದು, ದೀಪಾವಳಿಯ ಮೊದಲು ಮಾರುಕಟ್ಟೆಯಲ್ಲಿ ಪರಿಚಯಿಸಲಾಗುವುದು ಎಂದು ಹೇಳಿದರು.
350cc ಮೋಟಾರ್ಸೈಕಲ್ ಹೋಂಡಾ H’ness CB350 ಪ್ಲಾಟ್ಫಾರ್ಮ್ ಅನ್ನು ಆಧರಿಸಿದೆ. ಹೋಂಡಾದ ಸಮೂಹ-ವಿಭಾಗದ ಮೋಟಾರ್ಸೈಕಲ್ ಶ್ರೇಣಿಯು ಶೈನ್ 100, CD 110 ಡ್ರೀಮ್, ಲಿವೋ, ಶೈನ್ 125, SP125, ಯುನಿಕಾರ್ನ್, X-ಬ್ಲೇಡ್, ಹಾರ್ನೆಟ್ 2.0 ಮತ್ತು CB 200X ಅನ್ನು ಒಳಗೊಂಡಿದೆ. ಕಂಪೆನಿಯು ಡಿಯೋ, ಆಕ್ಟಿವಾ, ಆಕ್ಟಿವಾ 125 ಮತ್ತು ಗ್ರಾಜಿಯಾ 125 ನಂತಹ ಸ್ಕೂಟರ್ಗಳನ್ನು ಮಾರಾಟ ಮಾಡುತ್ತದೆ.