ಇತ್ತೀಚೆಗೆ ಬಿಡುಗಡೆಗೊಂಡ ಹೋಂಡಾ ಆಕ್ಟಿವಾ 6ಜಿ ಸ್ಕೂಟರ್ ಲಕ್ಷಾಂತರ ಗ್ರಾಹಕರ ಹೃದಯವನ್ನು ಗೆದ್ದಿದೆ. 109.51 ಸಿಸಿ ಇಂಧನ ಇಂಜೆಕ್ಷನ್ ಎಂಜಿನ್‌ನ್ನು ಒಳಗೊಂಡಿರುವ 6 ಜಿಯ ಎಂಜಿನ್‌ಗಳು 7.8 ಪಿಎಸ್ ಶಕ್ತಿಯನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ.
ಇದರ ಯಶಸ್ಸಿನ ಬಳಿಕ ಅತಿದೊಡ್ಡ ದ್ವಿಚಕ್ರ ವಾಹನ ಮಾರಾಟ ಕಂಪೆನಿ ಹೋಂಡಾ ಇದೀಗ ಆಕ್ಟಿವಾ 125 H- ಸ್ಮಾರ್ಟ್ ಎಂಬ ವಾಹನವನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡಲು ಸಿದ್ಧತೆ ನಡೆದಿದೆ. ಕಂಪೆನಿಯು ಈ ಹೊಸ ಸ್ಕೂಟರ್ ಕುರಿತು ಇನ್ನೂ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿಲ್ಲ.
ಆದರೆ, ಇದರ ಕೆಲವೊಂದು ಫೋಟೋಗಳನ್ನು ಕಂಪೆನಿ ಶೇರ್ ಮಾಡಿಕೊಂಡಿದ್ದು, ಇದನ್ನು ಗಮನಿಸಿದರೆ, ಹೊಸ ಸ್ಕೂಟರ್ನ ಕೆಲವು ಪ್ರಮುಖ ವೈಶಿಷ್ಟ್ಯಗಳು ಮತ್ತು ವಿನ್ಯಾಸವನ್ನು ಗಮನಿಸಬಹುದಾಗಿದೆ.
ಈ ಹೊಸ ಸ್ಕೂಟರ್, ನವೀಕರಿಸಿದ ಡಿಜಿಟಲ್ ಇನ್‌ಸೆಟ್ ಸೇರಿದಂತೆ ಕೆಲವು ಗಮನಾರ್ಹ ಬದಲಾವಣೆಗಳೊಂದಿಗೆ ಬರಲಿದೆ ಎಂದು ಫೋಟೋ ನೋಡಿದಾಗ ಗುರುತಿಸುವುದು ಕಷ್ಟವೇನಲ್ಲ,
ಇದು ಬಳಕೆದಾರರಿಗೆ ಪುಷ್ ಸ್ಟಾರ್ಟ್ ಬಟನ್, ಸ್ಮಾರ್ಟ್‌ಫೈಂಡ್ ವೈಶಿಷ್ಟ್ಯದಂತಹ ಉನ್ನತ ದರ್ಜೆಯ ವೈಶಿಷ್ಟ್ಯಗಳನ್ನು ನೀಡಲಿದೆ ಎನ್ನಲಾಗಿದೆ. ಏತನ್ಮಧ್ಯೆ, ಪ್ರಸ್ತುತ, ಕಂಪೆನಿಯು ಆಕ್ಟಿವಾ 125 ನ ಮೂರು ರೂಪಾಂತರಗಳನ್ನು ನೀಡಿದೆ.