ಕೈಗೆಟುಕುವ ಬೆಲೆಯಲ್ಲಿ ಲಭ್ಯವಿದ್ದ ಹೋಂಡಾದ ಶೈನ್ ಬೈಕ್‌ನ ಬೆಲೆಯನ್ನು 1,072 ರೂ.ಗಳಷ್ಟು ಏರಿಕೆ ಮಾಡಲಾಗಿದೆ. ಡ್ರಮ್ ಮತ್ತು ಡಿಸ್ಕ್ ಬ್ರೇಕ್ ಅವತರಣಿಕೆಗಳಿರುವ-ಬಿಎಸ್6 ಮಾಡೆಲ್ ಬೈಕ್‌ಗಳ ಬೆಲೆಯನ್ನು ಕಳೆದ ಎರಡು ತಿಂಗಳಲ್ಲಿ ಎರಡು ಬಾರಿ ಏರಿಕೆ ಮಾಡಲಾಗಿದೆ.
ಶೈನ್ 125 ಬಿಎಸ್ 6 ಬೈಕ್ ಅನ್ನು 2006ರಲ್ಲಿ ಹೋಂಡಾ ಲಾಂಚ್ ಮಾಡಿತ್ತು. ಭಾರತೀಯ ಮಾರುಕಟ್ಟೆಯಲ್ಲಿ ಅತ್ಯಂತ ಜನಪ್ರಿಯ ಬೈಕ್‌ಗಳಲ್ಲಿ ಒಂದಾದ ಶೈನ್‌ನ 90 ಲಕ್ಷ ಘಟಕಗಳು ಮಾರಾಟವಾಗಿವೆ. ಗಮನಾರ್ಹ ಸಂಗತಿಯೆಂದರೆ, ಬಿಡುಗಡೆ ಮಾಡಿದ ಒಂದೇ ವರ್ಷದಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿ ಈ ಬೈಕ್ ಅನ್ನು ಖರೀದಿ ಮಾಡಿದ್ದರು.
ಪರಿಷ್ಕೃತ ದರಗಳ ಪ್ರಕಾರ ಶೈನ್ ಡ್ರಮ್ ಅವತರಣಿಕೆಯು 71,550 ರೂ.ಗಳ ಬೆಲೆಯಿದ್ದರೆ, ಡಿಸ್ಕ್‌ಬ್ರೇಕ್ ಸಜ್ಜಿತ ಮಾಡೆಲ್ 76,346 ರೂ.ಗಳಷ್ಟಿದೆ. ಈ ಮಾಡೆಲ್‌ಗಳಿಗೆ ಯಾವುದೇ ತಾಂತ್ರಿಕ ಅಥವಾ ಹೊರನೋಟದ ಬದಲಾವಣೆಗಳನ್ನು ಮಾಡಲಾಗಿಲ್ಲ.
ಶೈನ್ ಪ್ರತಿಸ್ಫರ್ಧಿಯಾದ ಬಜಾಜ್‌ನ ಪಲ್ಸರ್ 125ರ ಬೆಲೆಯು 73,427 ರೂ.ಗಳಷ್ಟಿದೆ.
ಸದ್ಯದ ಮಟ್ಟಿಗೆ ಪ್ರಮೋಷನಲ್ ಅಭಿಯಾನ ನಡೆಸುತ್ತಿರುವ ಹೋಂಡಾ, ಶೈನ್ ಬಿಎಸ್6 ಮೋಟರ್‌ಸೈಕಲ್ ಮೇಲೆ 3,500 ರೂ.ಗಳಷ್ಟು ಕ್ಯಾಶ್‌ಬ್ಯಾಕ್ ಆಫರ್ ಇಟ್ಟಿದೆ. ಈ ಆಫರ್ ಪಡೆಯಲು ಜೂನ್ 30, 2021 ಕಡೆಯ ದಿನಾಂಕವಾಗಿವೆ. ಕ್ಯಾಶ್‌ಬ್ಯಾಕ್ ಕಾರಣದಿಂದ ಬೆಲೆ ಏರಿಕೆ ಅಷ್ಟಾಗಿ ಪ್ರಭಾವ ಬೀರುವುದಿಲ್ಲ.