alex Certify ಹೊಸ ಬಣ್ಣಗಳ ಆಯ್ಕೆಯಲ್ಲಿ ಹೈನೆಸ್ ಸಿಬಿ 350 ಮತ್ತು ಸಿಬಿ 350ಆರ್‌‌ಎಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೊಸ ಬಣ್ಣಗಳ ಆಯ್ಕೆಯಲ್ಲಿ ಹೈನೆಸ್ ಸಿಬಿ 350 ಮತ್ತು ಸಿಬಿ 350ಆರ್‌‌ಎಸ್

ಭಾರತೀಯ ಮಾರುಕಟ್ಟೆಯ ಆಧುನಿಕ ಕ್ಲಾಸಿಕ್ ಬೈಕ್ ವಿಭಾಗದಲ್ಲಿ ರಾಯಲ್ ಎನ್‌ಫೀಲ್ಡ್‌ನ ಕ್ಲಾಸಿಕ್ 350 ಮತ್ತು ಬುಲೆಟ್ 350ರೊಂದಿಗೆ ಸ್ಪರ್ಧಿಸಲು ಹೋಂಡಾ ತನ್ನ CB350 ಸರಣಿಯನ್ನು 2012ರಲ್ಲಿ ಬಿಡುಗಡೆ ಮಾಡಿತು.

ಇನ್ನಷ್ಟು ಹೆಚ್ಚಿನ ಗ್ರಾಹಕರನ್ನು ಆಕರ್ಷಿಸುವ ತನ್ನ ಇತ್ತೀಚಿನ ಪ್ರಯತ್ನದಲ್ಲಿ, ಜಪಾನಿನ ಆಟೋ ದಿಗ್ಗಜ ಹೈನೆಸ್ CB350 ಮತ್ತು CB350RS ಗೆ ಹೊಸ ಬಣ್ಣಗಳನ್ನು ಕೊಟ್ಟಿದೆ. ಹೋಂಡಾದ ಡೀಲರ್‌ಶಿಪ್‌ಗಳಿಗೆ ವಿತರಿಸಲಾದ ಈ ಬೈಕ್‌ಗಳ ಘಟಕಗಳಲ್ಲಿ ಅವುಗಳನ್ನು ನೋಡಬಹುದಾಗಿದೆ.

ಇತ್ತೀಚೆಗೆ ಸಿಗುತ್ತಿರುವ ಚಿತ್ರಗಳ ಪ್ರಕಾರ ಹೈನೆಸ್ CB350 ಈಗ ಮ್ಯಾಟ್ ಗ್ರೇ ಪೇಂಟ್ ಸ್ಕೀಮ್‌ನಲ್ಲಿ ಲಭ್ಯವಿದೆ. ಈ ಹೊಚ್ಚ-ಹೊಸ ಮೊನೊಟೋನ್ ಶೇಡ್ ಪರ್ಲ್ ನೈಟ್-ಬ್ಲ್ಯಾಕ್ ಮೆಟಾಲಿಕ್, ಪ್ರೆಶಸ್ ರೆಡ್ ಮೆಟಾಲಿಕ್ ಮತ್ತು ಮ್ಯಾಟ್ ಮಾರ್ಷಲ್ ಗ್ರೀನ್ ಮೆಟಾಲಿಕ್ ನಂತಹ ಮೊದಲೇ ಅಸ್ತಿತ್ವದಲ್ಲಿರುವ ಸಿಂಗಲ್-ಟೋನ್ ಫಿನಿಶ್‌ಗಳಿಗೆ ಸೇರುತ್ತದೆ.

ರಾತ್ರಿ ಮಲಗುವ ಮುನ್ನ ಹಾಲು ಕುಡಿಯುವುದು ಎಷ್ಟು ಅಪಾಯಕಾರಿ…? ಇಲ್ಲಿದೆ ಈ ಕುರಿತ ಮಾಹಿತಿ

ಹೋಂಡಾ ಹೈನೆಸ್ CB350 ಡ್ಯುಯಲ್-ಟೋನ್ ಬಣ್ಣಗಳಲ್ಲಿ ಲಭ್ಯವಿದೆ — ಮ್ಯಾಟ್ ಸ್ಟೀಲ್ ಬ್ಲಾಕ್ ಮೆಟಾಲಿಕ್ ಜೊತೆಗೆ ಮ್ಯಾಟ್ ಮ್ಯಾಸಿವ್ ಗ್ರೇ ಮೆಟಾಲಿಕ್, ಬ್ಲೂ ಮೆಟಾಲಿಕ್ ವಿತ್ ವರ್ಚುಯಸ್ ವೈಟ್ ಮತ್ತು ನೈಟ್ ಸ್ಟಾರ್ ಬ್ಲ್ಯಾಕ್ ಜೊತೆಗೆ ಸಿಲ್ವರ್ ಮೆಟಾಲಿಕ್.

ಹೋಂಡಾ CB350RSಗಾಗಿ, ಹೊಸ ಮೊನೊಟೋನ್ ನೀಲಿ ಛಾಯೆಯು ಪರ್ಲ್ ಸ್ಪೋರ್ಟ್ಸ್ ಹಳದಿ ಮತ್ತು ರೇಡಿಯಂಟ್ ರೆಡ್ ಮೆಟಾಲಿಕ್ ಬಣ್ಣದ ಆಯ್ಕೆಗಳೊಂದಿಗೆ ಕಪ್ಪು ಸೇರಿದಂತೆ ಈ ಮೊದಲೇ ಅಸ್ತಿತ್ವದಲ್ಲಿರುವ ಬಣ್ಣದ ಪ್ಯಾಲೆಟ್‌ಗಳನ್ನು ಸೇರಲಿದೆ.

ಹೈನೆಸ್ ಮತ್ತು RS ಎರಡೂ ಒಂದೇ ಫ್ರೇಮ್, ಎಂಜಿನ್ ಮತ್ತು ಎರಡೂ ಬೈಕ್‌ಗಳು 348.3cc, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್‌ನಿಂದ ಚಾಲಿತವಾಗಿದ್ದು, 21 PS ಪವರ್ ಮತ್ತು 30 Nm ಟಾರ್ಕ್ ಶಕ್ತಿ ಉತ್ಪತ್ತಿ ಮಾಡುತ್ತವೆ ಮತ್ತು ಇವುಗಳನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...