ತನ್ನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಗುಜರಾತ್‌ನ ವಿಠಲಾಪುರ ಸ್ಥಾವರದಲ್ಲಿ ಹೊಸ ಅಸೆಂಬ್ಲಿ ಲೈನ್ ಉದ್ಘಾಟಿಸಿರುವುದಾಗಿ ಘೋಷಿಸಿದೆ.
ತನ್ನ ನಾಲ್ಕನೇ ಉತ್ಪಾದನಾ ಘಟಕದಲ್ಲಿ ಹೊಸ 3 ನೇ ಅಸೆಂಬ್ಲಿ ಲೈನ್‌ನ ಪ್ರಾರಂಭವು ಹೋಂಡಾದ ಇನ್ನೂ 6.5 ಲಕ್ಷ ಘಟಕಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
HMSI 2001 ರಲ್ಲಿ ಹರಿಯಾಣದ ಮನೇಸರ್ ನಲ್ಲಿನ ತನ್ನ ಮೊದಲ ಸ್ಥಾವರದಿಂದ ಉತ್ಪಾದನೆಯನ್ನು ಪ್ರಾರಂಭಿಸಿತು. 2011 ರಲ್ಲಿ ಕಂಪನಿಯು ರಾಜಸ್ಥಾನದ ತಪುಕರದಲ್ಲಿ ತನ್ನ ಎರಡನೇ ಸ್ಥಾವರಕ್ಕೆ ಉತ್ಪಾದನೆ ಸಾಮರ್ಥ್ಯ ವಿಸ್ತರಿಸಿತು. ಇದರ ಮೂರನೇ ಸ್ಥಾವರವು 2013 ರಲ್ಲಿ ಕರ್ನಾಟಕದ ನರಸಾಪುರದಲ್ಲಿ ಮತ್ತು 2016 ರಲ್ಲಿ ವಿಠಲಾಪುರದಲ್ಲಿ ನಾಲ್ಕನೇ ಸ್ಥಾವರ ಬಂದಿತು.
ವಿಠಲಾಪುರ ಸೌಲಭ್ಯವು ಹೋಂಡಾದ ವಿಶ್ವದ ಅತಿದೊಡ್ಡ ಸ್ಕೂಟರ್ ಸ್ಥಾವರವಾಗಿದೆ. ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಸ್ಕೂಟರ್ ಆಕ್ಟಿವಾ , ಡಿಯೋ, ಆಕ್ಟಿವಾ 125 ಮತ್ತು ಡಿಯೋ 125 ನಂತಹ ಮಾದರಿಗಳನ್ನು ಇಲ್ಲಿ ತಯಾರಿಸಲಾಗುತ್ತದೆ.
ವಿಠಲಾಪುರ ಸ್ಥಾವರವು ಥಾಯ್ಲೆಂಡ್, ಯುಎಸ್, ಯುರೋಪ್ ಮತ್ತು ಜಪಾನ್‌ನಂತಹ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಸೇವೆ ಸಲ್ಲಿಸಲು ಜಾಗತಿಕ ಎಂಜಿನ್‌ಗಳನ್ನು (250 ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ವರ್ಗದ ದ್ವಿಚಕ್ರ ವಾಹನಗಳಿಗೆ) ತಯಾರಿಸಲು ಕಾರ್ಯ ನಿರ್ವಹಿಸುತ್ತದೆ.
ದ್ವಿಚಕ್ರ ವಾಹನ ಉತ್ಪಾದನಾ ಸಾಮರ್ಥ್ಯದಲ್ಲಿ ಜಾಗತಿಕವಾಗಿ ಹೋಂಡಾಕ್ಕೆ ಭಾರತವು ಪ್ರಮುಖ ಉತ್ಪಾದನಾ ನೆಲೆಗಳಲ್ಲಿ ಒಂದಾಗಿದೆ. ಹೋಂಡಾ ಉತ್ಪಾದನಾ ಪ್ರದೇಶದಲ್ಲಿ ಮಹಿಳಾ ಉದ್ಯೋಗಿಗಳನ್ನು ಹೆಚ್ಚಿಸಲು ಯೋಜಿಸುತ್ತಿದೆ.