ತನ್ನ ಹೈನೆಸ್ ಸಿಬಿ350 ಬೈಕ್ನ ವಾರ್ಷಿಕೋತ್ಸವದ ಪ್ರಯುಕ್ತ ವಿಶೇಷ ಅವತರಣಿಕೆಯ ಬೈಕ್ ಅನ್ನು ಹೋಂಡಾ ನಾಳೆ, ಡಿಸೆಂಬರ್ 4ರಂದು, ಬಿಡುಗಡೆ ಮಾಡಲಿದೆ.
ಈ ವಿಶೇಷ ಮೋಟರ್ ಸೈಕಲ್ ಬಗ್ಗೆ ಯಾವುದೇ ವಿವರಗಳನ್ನು ಹೋಂಡಾ ಇನ್ನೂ ಬಿಡುಗಡೆ ಮಾಡಿಲ್ಲ. ಆದರೆ ರೆಟ್ರೋ ಫ್ಲೇವರ್ನ ವಿಶಿಷ್ಟ ಬಣ್ಣವೊಂದರಲ್ಲಿ ಬೈಕ್ ಬಿಡುಗಡೆಯಾಗಲಿದೆ ಎಂದು ನಿರೀಕ್ಷಿಸಬಹುದಾಗಿದೆ. ಬೈಕ್ ಮೇಲೆ ಸ್ಪೋರ್ಟ್ ಗ್ರಾಫಿಕ್ ಇರುವ ಸಾಧ್ಯತೆ ಇದೆ. ಇವುಗಳ ಹೊರತಾಗಿ ಇನ್ನಾವುದೇ ಬದಲಾವಣೆಗಳನ್ನು ಮಾಡುವ ಸಾಧ್ಯತೆ ಇಲ್ಲವೆಂದು ತಿಳಿಸಲಾಗಿದೆ.
ಇಂಜಿನ್ನಲ್ಲಿ ಯಾವುದೇ ಬದಲಾವಣೆ ಇಲ್ಲ. 348 ಸಿಸಿಯ ಸಿಂಗಲ್ ಸಿಲಿಂಡರ್, ಏರ್-ಕೂಲ್ಡ್ ಇಂಜಿನ್ ಹೊಂದಿರುವ ಈ ಬೈಕ್ನಲ್ಲಿ, ಸೆಮಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಹಾಗೂ ಬ್ಲೂಟೂತ್ ಸಂಪರ್ಕಗಳ ಜೊತೆಗೆ ಟಾರ್ಕ್ ನಿಯಂತ್ರಣ ವ್ಯವಸ್ಥೆ, ಡ್ಯುಯಲ್ ಚಾನೆಲ್ ಎಬಿಎಸ್ ಸಹ ಇವೆ.
ಸಿಬಿ 350 ಸಿಸಿಯ ವಾರ್ಷಿಕೋತ್ಸವದ ಎಡಿಷನ್ ಬೈಕ್ ಕೊಂಚ ದುಬಾರಿಯಾಗುವ ಅಂದಾಜಿದೆ. ಈ ಮಾಡೆಲ್ನ ಸ್ಟಾಂಡರ್ಡ್ ಅವತರಣಿಕೆಯ ಎಕ್ಸ್ಶೋರೂಂ ಬೆಲೆ 1.94 ಲಕ್ಷ ರೂಪಾಯಿಗಳಷ್ಟಿದೆ.