ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಹೊಸ ‘ಡಿಯೋ ಸ್ಪೋರ್ಟ್ಸ್’ ಪರಿಚಯಿಸಿದ್ದು ಅತ್ಯಾಕರ್ಷಕವಾಗಿರುವ ಈ ಸ್ಕೂಟರ್ ಸೀಮಿತ ಅವಧಿಗೆ ಮಾತ್ರ ಗ್ರಾಹಕರಿಗೆ ಲಭ್ಯವಾಗಲಿದೆ.
ಆಕರ್ಷಕ ಗ್ರಾಫಿಕ್ಸ್ ಮತ್ತು ಸ್ಪೋರ್ಟಿ ರೆಡ್ ರಿಯರ್ ಸಸ್ಪೆನ್ಷನ್ ಜೊತೆಗೆ ಮರು ವಿನ್ಯಾಸಗೊಳಿಸಲಾಗಿರುವ ಈ ಸ್ಕೂಟರ್ ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಾಗುತ್ತದೆ. ಅಲ್ಲದೆ 110 ಸಿಸಿ ಪಿಜಿಎಂ FI ಇಂಜಿನ್ ಮತ್ತು ಟೆಲಿಸ್ಕೋಪಿಕ್ ಸಸ್ಪೆನ್ಷನ್ ಅನ್ನು ಹೊಂದಿದೆ.
ನವದೆಹಲಿಯಲ್ಲಿ ಎಕ್ಸ್ ಶೋರೂಮ್ ಬೆಲೆ ಸ್ಟ್ಯಾಂಡರ್ಡ್ ವೇರಿಯಂಟ್ ಗೆ 68,317 ರೂಪಾಯಿಗಳಾಗಿದ್ದು, ಡೀಲಕ್ಸ್ ರೂಪಾಂತರಕ್ಕೆ 73,317 ರೂಪಾಯಿ ನಿಗದಿಪಡಿಸಲಾಗಿದೆ. ಹೊಸ ಆವೃತ್ತಿಯ ಅನುಭವ ಪಡೆಯಲು ಬಯಸುವವರು ನೀವಾಗಿದ್ದರೆ www.honda2wheelersindia.com/booknow ಜಾಲತಾಣಕ್ಕೆ ಭೇಟಿ ನೀಡಬಹುದಾಗಿದೆ.