ಎಲೆಕ್ಟ್ರಿಕ್ ವಾಹನ ಉತ್ಪಾದನೆ ಕ್ಷೇತ್ರದಲ್ಲಿ ಭಾರೀ ಹುಮ್ಮಸ್ಸು ಕಾಣಿಸುತ್ತಿದ್ದು, ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ ರಾಜಸ್ಥಾನದ ತಪುಕರದಲ್ಲಿರುವ ಕಂಪನಿಯ ಘಟಕದಲ್ಲಿ ಬಹು ನಿರೀಕ್ಷಿತ ಹೋಂಡಾ ಸಿಟಿ ಇವಿ ಹೈಬ್ರಿಡ್ ಕಾರು ಉತ್ಪಾದನೆಯನ್ನು ಪ್ರಾರಂಭಿಸಿದೆ.
ಹೊಸ ಹೋಂಡಾ ಸಿಟಿ ಇ:ಎಚ್ಇವಿ ಭಾರತದ ಮೊದಲ ಪ್ರಬಲ ಹೈಬ್ರಿಡ್ ಎಲೆಕ್ಟ್ರಿಕ್ ವಾಹನವಾಗಿದೆ. ಡೀಲರ್ಗಳ ಮೂಲಕ ಗ್ರಾಹಕರು ರೂ 21,000 ನೀಡಿ ಬುಕಿಂಗ್ ಮಾಡಬಹುದು ಅಥವಾ ರೂ. 5,000 ನೊಂದಿಗೆ ಹೋಂಡಾ ಕಾರ್ಸ್ ಇಂಡಿಯಾ ವೆಬ್ಸೈಟ್ನಲ್ಲಿ ‘ಹೋಂಡಾ ಫ್ರಮ್ ಹೋಮ್’ ಪ್ಲಾಟ್ಫಾರ್ಮ್ ಮೂಲಕ ಬುಕ್ ಮಾಡಬಹುದು.
ಹೊಸ ಹೋಂಡಾ ಸಿಟಿ ವಿಶಿಷ್ಟತೆ ಸಾಕಷ್ಟಿದೆ, ಸ್ವಯಂ ಚಾರ್ಜಿಂಗ್ ಮತ್ತು ಹೆಚ್ಚು ಪರಿಣಾಮಕಾರಿಯಾದ ಎರಡು ಮೋಟಾರ್, ಪೆಟ್ರೋಲ್ ಎಂಜಿನ್, ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಇಂಟೆಲಿಜೆಂಟ್ ಪವರ್ ಯೂನಿಟ್ಗೆ ಸಂಪರ್ಕಿಸುತ್ತದೆ.
ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಕ್ಕೆ ಅಧಿಕಾರಿಗೆ ಥಳಿತ
ಮೂರು ಡ್ರೈವಿಂಗ್ ಮೋಡ್ಗಳನ್ನು ಬಳಸಬಹುದು. ಇವಿ ಡ್ರೈವ್, ಹೈಬ್ರಿಡ್ ಡ್ರೈವ್ ಮತ್ತು ಇಂಜಿನ್ ಡ್ರೈವ್ ಇದ್ದು, ಪವರ್ ಕಂಟ್ರೋಲ್ ಯುನಿಟ್ ಮೂಲಕ ಚಾಲನೆ ಸಂದರ್ಭಗಳ ಆಧಾರದ ಮೇಲೆ ಮೂರು ವಿಧಾನಗಳ ನಡುವೆ ಸ್ವಯಂಚಾಲಿತ ಸ್ವಿಚಿಂಗ್ಗೆ ಅವಕಾಶವಿದೆ.
26.5 ಕಿಮೀ/ಲೀ ಇಂಧನ ದಕ್ಷತೆಯ ಭರವಸೆ ನೀಡುತ್ತದೆ, ಇದು ಭಾರತದಲ್ಲಿನ ಅತ್ಯಂತ ಹೆಚ್ಚು ಮೈಲೇಜ್ ಕೊಡುವ ಕಾರುಗಳಲ್ಲಿ ಒಂದಾಗಿದೆ. ಹೋಂಡಾದ ಸುಧಾರಿತ ಇಂಟಲಿಜೆನ್ಸ್ ಸುರಕ್ಷತಾ ತಂತ್ರಜ್ಞಾನ “ಹೋಂಡಾ ಸೆನ್ಸಿಂಗ್” ನೊಂದಿಗೆ ಬರುತ್ತದೆ.
ಡಿಕ್ಕಿ ಮಿಟಿಗೇಶನ್ ಬ್ರೇಕಿಂಗ್ ಸಿಸ್ಟಮ್, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ರೋಡ್ ಡಿಪಾರ್ಚರ್ ಮಿಟಿಗೇಷನ್, ಲೇನ್ ಕೀಪಿಂಗ್ ಅಸಿಸ್ಟ್ ಸಿಸ್ಟಮ್ ಮತ್ತು ಆಟೋ ಹೈ-ಬೀಮ್ ಅನ್ನು ಸಹ ಒಳಗೊಂಡಿದೆ.
ಅಲೆಕ್ಸಾ ಮತ್ತು ಓಕೆ ಗೂಗಲ್ ಇಂಟಿಗ್ರೇಷನ್ಗಳ ಜೊತೆಗೆ ಸ್ಮಾರ್ಟ್ವಾಚ್ ಕಾರ್ಯ ನಿರ್ವಹಣೆಗೂ ಅವಕಾಶ ನೀಡುತ್ತದೆ. ಇದು ಆಟೋ ಬ್ರೇಕ್ ಹೋಲ್ಡ್ನೊಂದಿಗೆ ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್ ಸಹ ಇರಲಿದೆ. ಒನ್-ಟಚ್ ಎಲೆಕ್ಟ್ರಿಕ್ ಸನ್ರೂಫ್ ಮತ್ತು ಆಂಬಿಯೆಂಟ್ ಲೈಟಿಂಗ್ ಕೂಡ ಇದರ ವಿಶೇಷತೆಗಳು