ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಹೋಂಡಾ CB300R 2023 ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಆಧುನಿಕ ತಂತ್ರಜ್ಞಾನವನ್ನು ರೆಟ್ರೊ-ಪ್ರೇರಿತ ವಿನ್ಯಾಸದೊಂದಿಗೆ ಸಂಯೋಜಿಸುವ ಮೋಟಾರ್‌ಸೈಕಲ್ ಆಗಿದೆ. ಬೈಕ್‌ನ ಬೆಲೆ 2.40 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ, ನವದೆಹಲಿ) ಆಗಿದೆ. ಕಂಪನಿಯ ಬಿಗ್‌ವಿಂಗ್ ಡೀಲರ್‌ಶಿಪ್‌ಗಳಿಂದ ಖರೀದಿಸಬಹುದು.
ಹೋಂಡಾ CB300R 2023 286.01cc, 4-ಸ್ಟ್ರೋಕ್, ಸಿಂಗಲ್-ಸಿಲಿಂಡರ್, OBD2A-ಕಾಂಪ್ಲೈಂಟ್, PGM-FI ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಈ ಎಂಜಿನ್ ಗರಿಷ್ಠ 31.1PS ಪವರ್ ಮತ್ತು 27.5Nm ಗರಿಷ್ಠ ಟಾರ್ಕ್ ಅನ್ನು ನೀಡುತ್ತದೆ. ಅಲ್ಲಗೆ 6 ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ. ಸುಗಮವಾದ ಗೇರ್ ಬದಲಾವಣೆಗಳಿಗಾಗಿ ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಅನ್ನು ಸಹ ಸೇರಿಸಲಾಗಿದೆ.
ಹೋಂಡಾ CB300R 2023 ಐಕಾನಿಕ್ ಹೋಂಡಾ CB1000R ಲೀಟರ್-ಕ್ಲಾಸ್ ರೋಡ್‌ಸ್ಟರ್‌ನಿಂದ ಸ್ಫೂರ್ತಿ ಪಡೆದಿದೆ. ಇದು ಮಸ್ಕ್ಯುಲರ್ ಇಂಧನ ಟ್ಯಾಂಕ್ ಮತ್ತು ಬೀಫಿ ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಅನ್ನು ಒಳಗೊಂಡಿದೆ. ಬೈಕಿನ ಸೌಂದರ್ಯದ ಆಕರ್ಷಣೆಯು ಎಲ್ಲಾ ಎಲ್ಇಡಿ ಲೈಟಿಂಗ್ ಸಿಸ್ಟಮ್ನಿಂದ ಮತ್ತಷ್ಟು ವರ್ಧಿಸುತ್ತದೆ. ಎಲ್ಇಡಿ ಹೆಡ್ಲ್ಯಾಂಪ್, ಎಲ್ಇಡಿ ವಿಂಕರ್ ಗಳು ಮತ್ತು ಎಲ್ಇಡಿ ಟೈಲ್ ಲ್ಯಾಂಪ್ ಅನ್ನು ಒಳಗೊಂಡಿದೆ. ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಮರ್ಜೆನ್ಸಿ ಸ್ಟಾಪ್ ಸಿಗ್ನಲ್ ಮತ್ತು ಡೇಂಜರ್ ಬೆಳಕಿನ ಸ್ವಿಚ್ ಸೇರಿದಂತೆ ಇತರ ಗಮನಾರ್ಹ ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಹೋಂಡಾ CB300R 2023 ತೂಕ ಕೇವಲ 146 ಕೆಜಿ. ಇದು ತನ್ನ ವರ್ಗದಲ್ಲಿ ಹಗುರವಾದ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ. ಇದು 41mm USD ಮುಂಭಾಗದ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಅನ್ನು ಹೊಂದಿದೆ. ಬೈಕ್ 296 ಎಂಎಂ ಮುಂಭಾಗದ ಡಿಸ್ಕ್ ಮತ್ತು 220 ಎಂಎಂ ಹಿಂಭಾಗದ ಡಿಸ್ಕ್ನೊಂದಿಗೆ ಬರುತ್ತದೆ. ಡ್ಯುಯಲ್-ಚಾನೆಲ್ ಎಬಿಎಸ್ ಪ್ರಮಾಣಿತವಾಗಿದೆ.
ಹೋಂಡಾ CB300R 2023 ಎರಡು ಬಣ್ಣಗಳಲ್ಲಿ ಬರುತ್ತದೆ. ಗ್ರಾಹಕರು ತಮಗೆ ಎರಡರಲ್ಲಿ ಯಾವ ಬಣ್ಣ ಇಷ್ಟವಿದೆಯೋ ಅದನ್ನು ಆಯ್ಕೆ ಮಾಡಬಹುದು. ಪರ್ಲ್ ಸ್ಪಾರ್ಟನ್ ರೆಡ್ ( ಕಡು ಕೆಂಪು) ಮತ್ತು ಮ್ಯಾಟ್ ಮ್ಯಾಸಿವ್ ಗ್ರೇ ಮೆಟಾಲಿಕ್ (ಬೂದು) ಬಣ್ಣಗಳಲ್ಲಿ ಲಭ್ಯವಿದೆ. ಈ ಮೋಟಾರ್‌ಸೈಕಲ್‌ಗಾಗಿ ಬುಕ್ಕಿಂಗ್‌ಗಳು ಈಗ ತೆರೆದಿವೆ.