ಒಂದೇ ದಿನದಲ್ಲಿ 200 ಎಲಿವೇಟ್ ಎಸ್‌ಯುವಿಗಳನ್ನು ಚೆನ್ನೈನಲ್ಲಿ ವಿತರಿಸುವ ಮೂಲಕ ಹೋಂಡಾ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಹೋಂಡಾ ಕಾರ್ಸ್ ಇಂಡಿಯಾ ಹೊಸದಾಗಿ ಲಾಂಚ್ ಮಾಡಿರುವ ಎಲಿವೇಟ್ ಎಸ್ಯುವಿಗಳು ವ್ಯಾಪಕವಾಗಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಗ್ರಾಹಕರಿಗೆ ಉನ್ನತ ದರ್ಜೆಯ ಉತ್ಪನ್ನಗಳನ್ನು ತಲುಪಿಸಲು ಕಂಪನಿಯು ಅಚಲವಾದ ಬದ್ಧತೆಯನ್ನು ಹೊಂದಿದೆ ಎಂದು ಹೇಳಿಕೊಂಡಿದೆ.
ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ನ ಮಾರ್ಕೆಟಿಂಗ್ ಮತ್ತು ಮಾರಾಟ ವಿಭಾಗದ ನಿರ್ದೇಶಕ ಯುಚಿ ಮುರಾಟಾ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದು, ಇಂದು ಚೆನ್ನೈನಲ್ಲಿ ನಾವು ನಮ್ಮ ಬಹುನಿರೀಕ್ಷಿತ ಮೆಗಾ ಡೆಲಿವರಿ ಕಾರ್ಯಕ್ರಮ ನಡೆಸಿದ್ದೇವೆ. ನಮ್ಮ ಉತ್ಸಾಹಕ್ಕೆ ಎಲ್ಲೆ ಇಲ್ಲದಂತಾಗಿದೆ. ಹೋಂಡಾ ಎಲಿವೇಟ್ ಭಾರತೀಯ ಮಾರುಕಟ್ಟೆಗೆ ಸೂಕ್ತವಾದ ರೀತಿಯಲ್ಲಿ ರಚನೆಯಾದ ಕಾರಾಗಿದೆ. ಗ್ರಾಹಕರ ಈ ಅಭೂತಪೂರ್ವ ಸ್ಪಂದನೆಯು ಗ್ರಾಹಕರು ಹೋಂಡಾ ಕಂಪನಿಯ ಮೇಲೆ ಇಟ್ಟಿರುವ ನಂಬಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
ಬಹು ನಿರೀಕ್ಷಿತ ಹೋಂಡಾ ಎಲಿವೇಟ್ ಈಗಾಗಲೇ ಭಾರತೀಯ ಆಟೋ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಸಿದೆ. ಕ್ಲಾಸ್ ಲೀಡಿಂಗ್ ಕಂಫರ್ಟ್ ಹಾಗೂ ಇನ್ ಕ್ಯಾಬಿನ್ ಫೀಚರ್ನೊಂದಿಗೆ ಉಲ್ಲಾಸದಾಯಕವಾದ ಡ್ರೈವಿಂಗ್ ಅನುಭವ ನೀಡುತ್ತದೆ. ಇದರ ಎಕ್ಸ್ ಶೋ ರೂಂ ಬೆಲೆಯು 10.99 ಲಕ್ಷ ರೂಪಾಯಿಗಳಿಂದ ಆರಂಭವಾಗಿ 15.99 ಲಕ್ಷ ರೂಪಾಯಿಗಳವರೆಗೆ ಇರಲಿದೆ ಎಂದು ಕಂಪನಿ ತಿಳಿಸಿದೆ.
ಅರ್ಬನ್ ಫ್ರೀ ಸ್ಪೈಲರ್ ಎಂದು ಕರೆಯಲಾದ ಹೋಂಡಾ ಎಲಿವೇಟರ್ ದೃಢವಾದ ವಿನ್ಯಾಸವನ್ನು ಹೊಂದಿದೆ. 6-ಸ್ಪೀಡ್ MT ಮತ್ತು 7-ಸ್ಪೀಡ್ CVT ಸ್ವಯಂಚಾಲಿತ ಪ್ರಸರಣದೊಂದಿಗೆ ಪ್ರಬಲವಾದ 1.5L i-VTEC ಪೆಟ್ರೋಲ್ ಎಂಜಿನ್‌ನೊಂದಿಗೆ ಪಂಚ್ ಅನ್ನು ಪ್ಯಾಕ್ ಮಾಡುತ್ತದೆ. ಹೋಂಡಾ ಸೆನ್ಸಿಂಗ್‌ನ ಅತ್ಯಾಧುನಿಕ ADAS ತಂತ್ರಜ್ಞಾನ ಸೇರಿದಂತೆ ಅದರ ಸಾಮರ್ಥ್ಯದ ಒಳಾಂಗಣಗಳು ಮತ್ತು ಸುಧಾರಿತ ಸುರಕ್ಷತಾ ವೈಶಿಷ್ಟ್ಯಗಳು ಆರಾಮದಾಯಕ ಮತ್ತು ಒತ್ತಡ-ಮುಕ್ತ ಪ್ರಯಾಣವನ್ನು ಒದಗಿಸುತ್ತವೆ.