ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟವಾಗುವ ತನ್ನ ದ್ವಿಚಕ್ರ ವಾಹನಗಳಿಗೆ, ಗುಜರಾತ್‌ನ ವಿಠ್ಠಲಾಪುರದಲ್ಲಿ ಇಂಜಿನ್ ಉತ್ಪಾದಿಸುವ ಘಟಕವೊಂದಕ್ಕೆ ಹೋಂಡಾ ಮೋಟರ್ ಸೈಕಲ್ ಮತ್ತು ಸ್ಕೂಟರ್ ಚಾಲನೆ ನೀಡಿದೆ.
250ಸಿಸಿ ಹಾಗೂ ಅದರ ಮೇಲ್ಪಟ್ಟ ಸಾಮರ್ಥ್ಯದ ಇಂಜಿನ್‌ಗಳನ್ನು ಈ ಘಟಕದಲ್ಲಿ ಉತ್ಪಾದಿಸಿ, ಥಾಯ್ಲೆಂಡ್, ಅಮೆರಿಕ, ಕೆನಡಾ, ಜಪಾನ್, ಆಸ್ಟ್ರೇಲಿಯಾ, ಯೂರೋಪ್ ಮತ್ತು ಕೊಲ್ಲಿ ದೇಶಗಳಿಗೆ ಕಳುಹಿಸಲಾಗುತ್ತದೆ. ಮೊದಲ ವರ್ಷದಲ್ಲಿ 50,000 ಇಂಜಿನ್‌ಗಳ ಉತ್ಪಾದನೆಯನ್ನು ಈ ಘಟಕದಲ್ಲಿ ಮಾಡುವ ಉದ್ದೇಶ ಹೊಂದಲಾಗಿದೆ. ಮಾರುಕಟ್ಟೆಯ ಬೇಡಿಕೆಗಳ ಆಧಾರದ ಮೇಲೆ ಸಾಮರ್ಥ್ಯವನ್ನು ಮುಂದಿನ ದಿನಗಳಲ್ಲಿ ಹಿಗ್ಗಿಸಲಾಗುವುದು.
ಎಲಾನ್ ಮಸ್ಕ್ ರಂತೆಯೇ ಕಾಣುವ ಏಷ್ಯನ್ ವ್ಯಕ್ತಿ: ವಿಡಿಯೋ ವೈರಲ್
135 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಘಟಕದಲ್ಲಿ ಭಾರತ ಹಾಗೂ ಜಾಗತಿಕ ಮಾರುಕಟ್ಟೆಗೆ ಮಧ್ಯಮ ಗಾತ್ರದ ಇಂಜಿನ್‌ಗಳ ತಯಾರಿಕೆ ಮಾಡುವುದಾಗಿ ಹೋಂಡಾ ತಿಳಿಸಿದೆ.
“ಜಾಗತಿಕವಾಗಿ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವಂತೆ, ತನ್ನ ರಫ್ತು ಹೆಜ್ಜೆಗುರುತುಗಳನ್ನು ಇನ್ನಷ್ಟು ಹೆಚ್ಚಿಸಲು ಹೋಂಡಾ ದೂರದೃಷ್ಟಿ ಹೊಂದಿದೆ. ಭಾರತದಲ್ಲಿ ಬಿಎಸ್6 ಮಟ್ಟಗಳ ಪರಿಚಯವಾದ ಬಳಿಕ, ಈ ದೂರದೃಷ್ಟಿಯನ್ನು ಸಾಧಿಸುವತ್ತ ನಾವು ಇನ್ನೊಂದು ಹೆಜ್ಜೆ ಇಟ್ಟಿದ್ದೇವೆ. ಜಾಗತಿಕ ಗುಣಮಟ್ಟದ ಉತ್ಪಾದನೆಗೆ ಸಮನಾದ ಉತ್ಪನ್ನಗಳ ನಿರ್ಮಾಣದಿಂದ ಜಗತ್ತಿಗಾಗಿ ಭಾರತದಲ್ಲಿ ಸೃಷ್ಟಿಸುವ ದಿಕ್ಕಿನಲ್ಲಿ ಈ ಹೊಸ ವಿಸ್ತರಣೆಯು ಹೋಂಡಾದ ಬಲವನ್ನು ಇನ್ನಷ್ಟು ಹೆಚ್ಚಿಸಲಿದೆ,” ಎಂದು ಹೋಂಡಾ ಮೋಟರ್‌ಸೈಕಲ್ & ಸ್ಕೂಟರ್ ಇಂಡಿಯಾ ಖಾಸಗಿ ನಿಯಮಿತದ ಎಂಡಿ, ಅಧ್ಯಕ್ಷ ಮತ್ತು ಸಿಇಓ ಅಟ್ಸುಶಿ ಒಗಾಟಾ ತಿಳಿಸಿದ್ದಾರೆ.