alex Certify ಸಲಿಂಗಕಾಮ ಬರೀ ಆಯ್ಕೆಯಿಂದಲ್ಲ, ಈ ಸ್ಥಿತಿಗೆ ಕಾರಣವಾಗುತ್ತೆ ಹಾರ್ಮೋನ್‌…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲಿಂಗಕಾಮ ಬರೀ ಆಯ್ಕೆಯಿಂದಲ್ಲ, ಈ ಸ್ಥಿತಿಗೆ ಕಾರಣವಾಗುತ್ತೆ ಹಾರ್ಮೋನ್‌…!  

ಸಲಿಂಗಕಾಮವು ಇತ್ತೀಚಿನ ದಿನಗಳಲ್ಲಿ ಬಹಳ ಚರ್ಚೆಯಲ್ಲಿದೆ. ಒಂದೇ ಲಿಂಗದ ಜನರ ಕಡೆಗಿನ ಆಕರ್ಷಣೆ ಮತ್ತು ಪ್ರೀತಿಯನ್ನು ಅನುಭವಿಸುವ ನಡವಳಿಕೆಯನ್ನು ಸಲಿಂಗಕಾಮವೆಂದು ಕರೆಯಲಾಗುತ್ತದೆ. ಈ ರೀತಿ ಸಲಿಂಗಿಯಾಗಲು ಅನೇಕ ಕಾರಣಗಳಿರುತ್ತವೆ. ಇವುಗಳಲ್ಲೊಂದು ಹಾರ್ಮೋನ್.‌

ಗರ್ಭಾವಸ್ಥೆಯಲ್ಲಿ ಮಗುವಿನ ಮೇಲೆ ಪರಿಣಾಮ ಬೀರುವ ಪ್ರಸವಪೂರ್ವ ಆಂಡ್ರೊಜೆನ್ ಮಟ್ಟಗಳು ಸಲಿಂಗಕಾಮಿ ವರ್ತನೆಗೆ ಕಾರಣವಾಗಬಹುದು ಎಂದು ಕೆಲವು ಸಂಶೋಧನೆಗಲ್ಲಿ ಕಂಡುಬಂದಿದೆ. ಇದರ ಜೊತೆಗೆ  ಸಲಿಂಗಕಾಮಿ ಜನರಲ್ಲಿ ಮೆದುಳಿನ ಕೆಲವು ಭಾಗಗಳಲ್ಲಿ ರಚನಾತ್ಮಕ ವ್ಯತ್ಯಾಸಗಳಿರುತ್ತವೆ. ಆದಾಗ್ಯೂ ಹಾರ್ಮೋನ್ ಅಂಶಗಳು ಮಾತ್ರ ಸಲಿಂಗಕಾಮವನ್ನು ನಿರ್ಧರಿಸುವುದಿಲ್ಲ. ವೈಯಕ್ತಿಕ ಅನುಭವ, ಪಾಲನೆ ಮತ್ತು ಸಾಮಾಜಿಕ-ಸಾಂಸ್ಕೃತಿಕ ಅಂಶಗಳೂ ಪ್ರಮುಖ ಪಾತ್ರವಹಿಸುತ್ತವೆ.

ಹುಡುಗರು ಹುಡುಗಿಯರಂತೆ ಏಕೆ ಧ್ವನಿಸುತ್ತಾರೆ?

ಜನನದ ಸಮಯದಲ್ಲಿ ಟೆಸ್ಟೋಸ್ಟೆರಾನ್‌ನಂತಹ ಹಾರ್ಮೋನ್‌ಗಳನ್ನು ಅಸಹಜವಾಗಿ ಹೆಚ್ಚಿನ ಅಥವಾ ಕಡಿಮೆ ಮಟ್ಟದಲ್ಲಿ ಹೊಂದಿರುವ ಶಿಶುಗಳು ಸಲಿಂಗಕಾಮಿ ನಡವಳಿಕೆಯನ್ನು ತೋರುವ ಸಾಧ್ಯತೆಯಿರುತ್ತದೆ. ಉದಾಹರಣೆಗೆ ಹುಡುಗನಿಗೆ ಜನನದ ನಂತರ ಕಡಿಮೆ ಮಟ್ಟದ ಟೆಸ್ಟೋಸ್ಟೆರಾನ್ ಇರಬಹುದು. ಪರಿಣಾಮ ತೆಳುವಾದ ಧ್ವನಿ, ಹುಡುಗರೊಂದಿಗೆ ಹೆಚ್ಚು ಮಾತನಾಡದಿರುವುದು ಈ ರೀತಿಯ ಲಕ್ಷಣಗಳು ಕಾಣಿಸಬಹುದು. ಅದೇ ಸಮಯದಲ್ಲಿ ಹುಡುಗಿಯರಲ್ಲಿ ಟೆಸ್ಟೋಸ್ಟೆರಾನ್ ಹಾರ್ಮೋನ್ ಅಧಿಕವಾಗಿದ್ದರೆ ದೇಹವು ಹುಡುಗಿಯರಿಗಿಂತ ಭಾರವಾಗಿರುತ್ತದೆ. ಧ್ವನಿಯಲ್ಲಿ ಒರಟುತನ, ಮುಖದ ಮೇಲೆ ಕೂದಲು ಮತ್ತು ಅಂಗಗಳಲ್ಲಿನ ಬದಲಾವಣೆಗಳು ಕಂಡುಬರುತ್ತವೆ.

ಅನೇಕ ಬಾರಿ ಸಲಿಂಗಕಾಮಿಗಳನ್ನು ಸಮಾಜ ಮತ್ತು ಕುಟುಂಬವು ಸ್ವೀಕರಿಸುವುದಿಲ್ಲ. ಆದರೆ ಲೈಂಗಿಕ ದೃಷ್ಟಿಕೋನವು ವ್ಯಕ್ತಿಯ ವೈಯಕ್ತಿಕ ವಿಷಯ ಎಂದು ನಾವು ಅರ್ಥಮಾಡಿಕೊಳ್ಳಬೇಕು. ಲೈಂಗಿಕ ದೃಷ್ಟಿಕೋನವನ್ನು ಲೆಕ್ಕಿಸದೆ ಅವರ ಆಯ್ಕೆಯನ್ನು ಗೌರವಿಸಬೇಕು. ಸಲಿಂಗಕಾಮಿಗಳನ್ನು ದ್ವೇಷಿಸುವುದು ಅಥವಾ ಗೇಲಿ ಮಾಡುವುದು ತಪ್ಪು. ಇದು ಹಾರ್ಮೋನ್‌ಗಳಿಂದ ಉಂಟಾಗುತ್ತದೆಯೇ ಹೊರತು ಯಾವುದೇ ಕಾಯಿಲೆಯಲ್ಲ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...