ಟಾಯ್ಲೆಟ್ ಎಷ್ಟು ಕ್ಲೀನ್ ಮಾಡಿದರೂ ವಾಸನೆ ಹೋಗಲ್ಲ. ಒಂದು ರೀತಿಯ ವಾಸನೆ ಬರುತ್ತದೆ ಎನ್ನುವವರು ಮನೆಯಲ್ಲಿಯೇ ಒಮ್ಮೆ ಈ ಟಾಯ್ಲೆಟ್ ಕ್ಲಿನಿಂಗ್ ಬಾಂಬ್ ಮಾಡಿನೋಡಿ. ಇದನ್ನು ಸ್ಟೋರ್ ಮಾಡಿ ಕೂಡ ಇಟ್ಟುಕೊಳ್ಳಬಹುದು.
½ ಕಪ್ – ಸಿಟ್ರಿಕ್ ಆ್ಯಸಿಡ್, ½ ಕಪ್ – ಬೇಕಿಂಗ್ ಸೋಡಾ, ½ ಕಪ್ – ಕಾರ್ನ್ ಸ್ಟಾರ್ಚ್, 1 ಟೀ ಸ್ಪೂನ್ – ನೀರು, ಎಸೆನ್ಸಿಯಲ್ ಆಯಿಲ್ – 30, ಸಿಲಿಕಾನ್ ಮೌಲ್ಡ್, ಗ್ಲಾಸ್ ಬೌಲ್, ಸಣ್ಣದಾದ ಗ್ಲಾಸ್ ಸ್ಪ್ರೇ ಬಾಟೆಲ್.
ಒಂದು ಗ್ಲಾಸ್ ಬೌಲ್ ಗೆ ಸಿಟ್ರಿಕ್ ಆ್ಯಸಿಡ್, ಬೇಕಿಂಗ್ ಸೋಡಾ, ಕಾರ್ನ್ ಸ್ಟಾರ್ಚ್ ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಎಸೆನ್ಸಿಯಲ್ ಆಯಿಲ್ ಸೇರಿಸಿ. ನೀರನ್ನು ಸ್ಪ್ರೇ ಬಾಟಲಿನ ಸಹಾಯದಿಂದ ಈ ಮಿಶ್ರಣಕ್ಕೆ ಸ್ಪ್ರೇ ಮಾಡಿಕೊಳ್ಳಿ. ಜಾಸ್ತಿ ನೀರು ಬೇಡ. ಈ ಮಿಶ್ರಣ ತುಸು ಒದ್ದೆ ಆದರೆ ಸಾಕು. ನಂತರ ಸ್ವಲ್ಪ ಸ್ವಲ್ಪ ಮಿಶ್ರಣ ತೆಗೆದುಕೊಂಡು ಇದನ್ನು ಸಿಲಿಕಾನ್ ಮೌಲ್ಡ್ ಗೆ ಹಾಕಿ ಫ್ರಿಜರ್ ನಲ್ಲಿ 4 ಗಂಟೆಗಳ ಕಾಲ ಇಡಿ. ನಂತರ ಒಂದು ಗಾಜಿನ ಡಬ್ಬದಲ್ಲಿ ಸ್ಟೋರ್ ಮಾಡಿಕೊಳ್ಳಿ. ಕಮೋಡ್ ಒಳಗೆ ಒಂದು ಪೀಸ್ ಹಾಕಿ 10 ನಿಮಿಷ ಹಾಗೇಯೇ ಬಿಡಿ ನಂತರ ಪ್ಲಷ್ ಮಾಡಿ ಟಾಯ್ಲೆಟ್ ಕ್ಲೀನ್ ಆಗುತ್ತದೆ.