ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದನ್ನು ಚರ್ಮದ ಸೌಂದರ್ಯ ಹೆಚ್ಚಿಸಲು ಹೆಚ್ಚಾಗಿ ಬಳಸುತ್ತಾರೆ. ಹಾಗೇ ಇದರ ಸಿಪ್ಪೆಯೂ ಕೂಡ ಚರ್ಮಕ್ಕೆ ತುಂಬಾ ಉಪಯೋಗಕಾರಿಯಾಗಿದೆ. ಹಾಗಾಗಿ ಕಿತ್ತಳೆಯ ಸಿಪ್ಪೆಯಿಂದ ಸೋಪ್ ತಯಾರಿಸಿ ಮುಖಕ್ಕೆ ಬಳಸಿದರೆ ಸೌಂದರ್ಯ ಸಮಸ್ಯೆಗಳು ದೂರವಾಗುತ್ತದೆ. ಹಾಗಾಗಿ ಈ ಸೋಪ್ ತಯಾರಿಸುವುದು ಹೇಗೆ ಎಂಬುದನ್ನು ತಿಳಿಯೋಣ.
ಒಂದು ಪಾತ್ರೆಯಲ್ಲಿ ಸೋಪ್ ಬೆಸ್ ಸ್ವಲ್ಪ ತೆಗೆದುಕೊಂಡು ಅದನ್ನು ಕತ್ತರಿಸಿಕೊಂಡು ಮೈಕ್ರೋವೇವ್ ನಲ್ಲಿ ಬಿಸಿ ಮಾಡಿ. ಅದು ಸಂಪೂರ್ಣವಾಗಿ ಕರಗಿದ ಬಳಿಕ ಅದಕ್ಕೆ 1 ಚಮಚ ಕಿತ್ತಳೆ ಸಿಪ್ಪೆ ಪುಡಿ, ವಿಟಮಿನ್ ಇ ಎಣ್ಣೆ ಮತ್ತು ಕೆಲವು ಹನಿ ನಿಂಬೆ ಎಸೆನ್ಷಿಯಲ್ ಆಯಿಲ್ ನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸೋಪ್ ಅಚ್ಚಿಗೆ ಸುರಿಯಿರಿ.
1 ಗಂಟೆ ತಣ್ಣಗಾಗಲು ಬಿಡಿ. ಆಗ ಸೋಪ್ ರೆಡಿ ಆಗುತ್ತದೆ. ಈ ಸೋಪ್ ನಿಂದ ಪ್ರತಿದಿನ ಮುಖ ವಾಶ್ ಮಾಡುವುದರಿಂದ ಮೊಡವೆಗಳು, ಕಪ್ಪು ಕಲೆಗಳು ಮುಂತದ ಸೌಂದರ್ಯದ ಸಮಸ್ಯೆಗಳನ್ನು ನಿವಾರಿಸಿಕೊಳ್ಳಿಬಹುದು.