ವಯಸ್ಸಾದಂತೆ ಕೂದಲು ಬೆಳ್ಳಗಾಗುವುದು ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಚಿಕ್ಕವರು ದೊಡ್ಡವರೆನ್ನದೇ ಎಲ್ಲರ ಕೂದಲೂ ಬೆಳ್ಳಗಾಗುತ್ತಿವೆ. ಕೂದಲನ್ನು ಕಪ್ಪಾಗಿಸಲು ಎಲ್ಲರೂ ಅನೇಕ ರೀತಿಯ ಕಲರಿಂಗ್ ಪೌಡರ್ ಗಳನ್ನು ಬಳಸುತ್ತಾರೆ.
ಇಂತಹ ಪೌಡರ್ ಗಳಿಂದ ಅನೇಕರಿಗೆ ತೊಂದರೆ ಉಂಟಾಗುತ್ತದೆ. ಅಂತಹ ಅಪಾಯಕಾರಿ ಕಲರ್ ಗಳನ್ನು ಬಳಸುವ ಬದಲು ಮನೆಯಲ್ಲೇ ತಯಾರಿಸಲಾಗುವ ಕೆಲವು ಎಣ್ಣೆಗಳಿಂದ ಕೂದಲನ್ನು ಕಪ್ಪಾಗಿಸಬಹುದು. ಅಂತಹ ಕೆಲವು ಮನೆಯಲ್ಲೇ ತಯಾರಿಸಬಹುದಾದ ಎಣ್ಣೆಗಳು ಇಲ್ಲಿವೆ.
ಕುಂಬಳಕಾಯಿಯ ರಸದಿಂದ ಕೂದಲನ್ನು ಕಪ್ಪಾಗಿಸಬಹುದು. ಇದರ ರಸದೊಂದಿಗೆ ಆಲಿವ್ ಎಣ್ಣೆ ಅಥವಾ ಎಳ್ಳಿನ ಎಣ್ಣೆಯನ್ನು ಬೆರೆಸಿ ತಲೆಗೆ ಹಚ್ಚುವುದರಿಂದ ಕೂದಲು ಕಪ್ಪಾಗುತ್ತದೆ.
ಹೀರೇಕಾಯಿಯನ್ನು ತೆಂಗಿನ ಎಣ್ಣೆಯೊಂದಿಗೆ ಸೇರಿಸಿ 3-4 ಗಂಟೆಗಳ ಕಾಲ ಕುದಿಸಿ. ಕುದಿಸಿದ ಎಣ್ಣೆ ಕಪ್ಪು ಬಣ್ಣ ಬಂದ ಮೇಲೆ ಅದನ್ನು ಕೂದಲಿಗೆ ಹಚ್ಚಬೇಕು.
ತಲೆಸ್ನಾನ ಮಾಡುವುದಕ್ಕಿಂತ 10 ನಿಮಿಷ ಮೊದಲು ಈರುಳ್ಳಿಯ ರಸ ಮತ್ತು ತಿರುಳನ್ನು ತಲೆಗೆ ಹಚ್ಚಬೇಕು.
ಟೀ ಪುಡಿಯನ್ನು ನೀರಿನಲ್ಲಿ ಕುದಿಸಿ ಅದು ಆರಿದ ನಂತರ ತಲೆಗೆ ಹಚ್ಚಬೇಕು. ಇದು ಶಾಂಪೂ ರೀತಿ ಕೆಲಸ ಮಾಡುತ್ತದೆ.
ಆಕಳ ಹಸಿ ಹಾಲನ್ನು ತಲೆಗೆ ಹಚ್ಚಿ ಮಸಾಜ್ ಮಾಡುವುದರಿಂದ ಕೂದಲು ಬೆಳ್ಳಗಾಗುವುದಿಲ್ಲ.
ಮೆಹೆಂದಿ ಮತ್ತು ಮೊಸರನ್ನು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ ವಾರದಲ್ಲಿ ಒಮ್ಮೆ ಹಚ್ಚಬೇಕು.
ಬಾದಾಮಿ ಎಣ್ಣೆಯೊಂದಿಗೆ ನೆಲ್ಲಿಕಾಯಿ ಎಣ್ಣೆ ಬೆರೆಸಿ ಸತತವಾಗಿ ಕೂದಲಿಗೆ ಹಚ್ಚುವುದರಿಂದ ಕೂದಲು ಕಪ್ಪಗಾಗುತ್ತದೆ.
ಪೇರಲೆ ಎಲೆಗಳನ್ನು ಪುಡಿಮಾಡಿ ನೀರಿನೊಂದಿಗೆ ಬೆರೆಸಿ ತಲೆ ಸ್ನಾನ ಮಾಡಬೇಕು.