ನಿಮ್ಮ ಚರ್ಮವನ್ನು ಸೂರ್ಯನ ಕಿರಣಗಳಿಂದ ರಕ್ಷಿಸಿಕೊಳ್ಳುವುದು ಅತಿ ಅವಶ್ಯಕ. ಮಾರುಕಟ್ಟೆಯಲ್ಲಿ ಸಿಗುವ ಕೆಮಿಕಲ್ ಯುಕ್ತ ಕ್ರೀಂಗಳನ್ನು ಹಚ್ಚುವುದರಿಂದ ಇನ್ನಷ್ಟು ಹಾನಿಯಾಗುತ್ತದೆ. ಆದ ಕಾರಣ ಸೂರ್ಯ ಕಿರಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಲು ನೈಸರ್ಗಿಕವಾದ ಈ ವಸ್ತುಗಳನ್ನು ಹಚ್ಚಿ.
¼ ಕಪ್ ತೆಂಗಿನೆಣ್ಣೆ, ¼ ಕಪ್ ಶಿಯಾ ಬಟರ್, 2 ಚಮಚ ಎಳ್ಳೆಣ್ಣೆ, 2 ಚಮಚ ಜೇನಿನ ಮೇಣ ವನ್ನು ತೆಗೆದುಕೊಂಡು ಇವಿಷ್ಟನ್ನು ಡಬಲ್ ಬಾಯ್ಲರ್ ನಲ್ಲಿ ಕರಗಿಸಿ. ಬಳಿಕ ಅದನ್ನು ತಣ್ಣಗಾಗಿಸಿ 15 ನಿಮಿಷ ಫ್ರಿಜರ್ ನಲ್ಲಿ ಇಡಿ. ಆನಂತರ ಇದಕ್ಕೆ 1 ಚಮಚ ರೆಡ್ ರಾಸ್ಪ್ಬೆರಿ ಬೀಜದ ಎಣ್ಣೆ, 1 ಚಮಚ ಕ್ಯಾರೆಟ್ ಬೀಜದ ಎಣ್ಣೆ, 1 ಚಮಚ ಲ್ಯಾವೆಂಡರ್ ಆಯಿಲ್ ನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಹೊರಗೆ ಹೋಗುವಾಗ ಚರ್ಮಕ್ಕೆ ಹಚ್ಚಿದರೆ ಸೂರ್ಯ ಬಿಸಿಲಿನ ಪ್ರಭಾವ ನಿಮ್ಮ ಚರ್ಮದ ಮೇಲಾಗುವುದಿಲ್ಲ.