ಮುಖದಲ್ಲಿ ಮಂದಹಾಸವಿದ್ದರೆ ಯಾವುದೇ ಮೇಕಪ್ ಬೇಡ ಅನ್ನೋದನ್ನ ಕೇಳಿದ್ದೀವಿ. ಮಂದಹಾಸಕ್ಕೆ ಕಾರಣವಾಗೋ ತುಟಿಗಳ ರಕ್ಷಣೆ ಕೂಡ ಅಷ್ಟೇ ಅತ್ಯಗತ್ಯ. ಹಾಗಾದ್ರೆ ಮನೆಯಲ್ಲೇ ಸಿಗೋ ಬೀಟ್ರೂಟ್ ನಿಂದ ಹೇಗೆ ಲಿಪ್ ಬಾಮ್ ಮಾಡೋದು ತಿಳಿಯೋಣ.
ಒಂದು ಬಟ್ಟಲಿಗೆ ಒಂದು ಸ್ಪೂನ್ ತುಪ್ಪ ಹಾಕಿ ಹಬೆಯಲ್ಲಿ ಕರಗಲು ಬಿಡಿ. ಅದಕ್ಕೆ ಬೇಕಿದ್ದರೆ ಅರ್ಧ ಚಮಚ ವ್ಯಾಸಲಿನ್ ಹಾಕಿಕೊಳ್ಳಬಹುದು. ಚೆನ್ನಾಗಿ ಕರಗಿದ ನಂತರ ಅರ್ಧ ಹೋಳಿನಿಂದ ತೆಗೆದ ಬೀಟ್ರೂಟ್ ರಸವನ್ನು ಬಟ್ಟಲಿಗೆ ಹಾಕಿ.
ಮಿಶ್ರಣವನ್ನು ಚೆನ್ನಾಗಿ ಕದಡಬೇಕು. ಸರಿಯಾಗಿ ಬೆರೆತ ನಂತರ ತಣ್ಣಗಾದ ಮೇಲೆ ಕೆಲ ಹೊತ್ತು ಫ್ರೀಜರ್ ನಲ್ಲಿಡಬೇಕು. ಅಲ್ಲಿಗೆ ಲಿಪ್ ಬಾಮ್ ರೆಡಿ.
ಟ್ಯಾನ್ ಆದ ತುಟಿಗಳಿಗೆ ಹಾಗೂ ಒಡೆದ ತುಟಿಗೆ ಈ ಹೋಮ್ ಮೇಡ್ ಲಿಪ್ ಬಾಮ್ ತುಂಬಾನೇ ಒಳ್ಳೇದು. ನಮಗೆ ಬೇಕಾದಾಗ ಹಚ್ಚಿಕೊಂಡು ಮತ್ತೆ ಫ್ರಿಡ್ಜ್ ನಲ್ಲಿಟ್ರೆ ಲಿಪ್ ಬಾಮ್ ಕೆಡುವುದಿಲ್ಲ.
ಬೀಟ್ರೂಟ್ ಬಣ್ಣ ತುಟಿಯನ್ನು ಎದ್ದು ಕಾಣುವಂತೆ ಮಾಡುತ್ತದೆ ಅನ್ನೋ ಗೊಂದಲವಿದ್ರೆ ಮಲಗುವ ಮುನ್ನ ಹಚ್ಚಿಕೊಳ್ಳಬಹುದು.