ಮನೆಯ ಕ್ಲೀನಿಂಗ್ ಗೆಂದು ವಿನೇಗರ್ ಬಳಸುತ್ತೇವೆ. ಅಡುಗೆ ಮನೆ ಕಟ್ಟೆ, ಸಿಂಕ್, ಟೇಬಲ್ ಕ್ಲೀನ್ ಸ್ವಚ್ಛಗೊಳಿಸುವುದಕ್ಕೆ ಈ ವಿನೇಗರ್ ತುಂಬಾ ಸಹಾಯಕಾರಿಯಾಗಿದೆ. ಈ ವಿನೇಗರ್ ಗೆ ಲಿಂಬೆ, ಹಾಗೂ ಕಿತ್ತಳೆಹಣ್ಣಿನ ಸಿಪ್ಪೆ ಬಳಸಿಕೊಂಡರೆ ಪರಿಮಳದಾಯಕವಾಗಿರುತ್ತದೆ. ಜತೆಗೆ ಸಿಟ್ರಸ್ ಹಣ್ಣುಗಳಾದ ಇವುಗಳು ಉಪ್ಪು ನೀರಿನ ಕಲೆಯನ್ನು ಬೇಗನೆ ತೆಗೆದು ಹಾಕುತ್ತದೆ.
ಮನೆಯಲ್ಲಿ ತಿಂದು ಬಿಸಾಕಿದ ಲಿಂಬೆಹಣ್ಣಿನ ಸಿಪ್ಪೆ, ಕಿತ್ತಳೆಹಣ್ಣಿನ ಸಿಪ್ಪೆಯನ್ನು ಬಳಸಿಕೊಂಡು ಇದನ್ನು ತಯಾರು ಮಾಡಬಹುದು. ಮನೆ ಕೂಡ ಪರಿಮಳದಿಂದ ಕೂಡಿರುತ್ತದೆ. ಮಾಡುವ ವಿಧಾನ ಇಲ್ಲಿದೆ ನೋಡಿ.
ಚೆನ್ನಾಗಿ ತೊಳೆದು ಒಣಗಿಸಿದ ಗಾಜಿನ ಬಾಟೆಲ್ ಗೆ ಒಂದು ಹಿಡಿಯಷ್ಟು ಲಿಂಬೆ ಹಣ್ಣು ಹಾಗೂ ಕಿತ್ತಳೆಹಣ್ಣಿನ ಸಿಪ್ಪೆ ಕತ್ತರಿಸಿ ಹಾಕಿ. ಬಾಟಲಿಯ ಮುಕ್ಕಾಲು ಭಾಗದಷ್ಟು ವೈಟ್ ವಿನೇಗರ್ ಅನ್ನು ಹಾಕಿ ಮುಚ್ಚಳ ಮುಚ್ಚಿ ಒಂದು ವಾರಗಳ ಕಾಲ ಹಾಗೇಯೇ ಇಡಿ. ನಂತರ ಒಂದು ಸ್ಪ್ರೇ ಬಾಟೆಲ್ ಗೆ ಅರ್ಧ ಕಪ್ ಈ ವಿನೇಗರ್ ಮಿಶ್ರಣ ಹಾಗೂ ಇನ್ನರ್ಧ ಕಪ್ ನೀರು ಹಾಕಿಕೊಂಡು ಕ್ಲೀನಿಂಗ್ ಗೆ ಬಳಸಿಕೊಳ್ಳಬಹುದು. ಕಿಟಕಿಯ ಗಾಜು, ಮೈಕ್ರೋವೇವ್ ಸ್ವಚ್ಚತೆಗೂ ಇದನ್ನು ಬಳಸಬಹುದು.