ಸ್ನಾನ ಮಾಡುವಾಗ ಸೋಪು ಬೇಕೆ ಬೇಕು. ಈಗ ಸಾಕಷ್ಟು ಬಗೆಯ ಸೋಪುಗಳು ಮಾರುಕಟ್ಟೆಯಲ್ಲಿದೆ. ಇದರಲ್ಲಿ ಸಾಕಷ್ಟು ರಾಸಾಯನಿಕಗಳನ್ನು ಮಿಶ್ರಣ ಮಾಡಿರುತ್ತಾರೆ.
ಪ್ರತಿ ದಿನ ಇದನ್ನು ಉಪಯೋಗಿಸಿ ತ್ವಚೆಯ ಕಾಂತಿ ಕಳೆದುಕೊಳ್ಳುವ ಬದಲು ಮನೆಯಲ್ಲಿಯೇ ಹರ್ಬಲ್ ಬಾತ್ ಪೌಡರ್ ಅನ್ನು ಮಾಡಿ ಉಪಯೋಗಿಸಿದರೆ ತ್ವಚೆಯು ಕಾಂತಿಯುತವಾಗುತ್ತದೆ. ಹರ್ಬಲ್ ಬಾತ್ ಪೌಡರ್ ಹೇಗೆ ತಯಾರಿಸುವುದೆಂಬ ಮಾಹಿತಿ ಇಲ್ಲಿದೆ ನೋಡಿ.
ಬೇಕಾಗುವ ಸಾಮಾಗ್ರಿಗಳು-ಹೆಸರುಕಾಳು-1 ಕೆಜಿ, ಕಸ್ತೂರಿ ಅರಿಶಿನ-100 ಗ್ರಾಂ, ಲಾವಂಚ-ಸ್ವಲ್ಪ, ಬೇವಿನೆಲೆ-1 ಹಿಡಿ.
ಮಾಡುವ ವಿಧಾನ: ಇವಿಷ್ಟನ್ನು 2 ದಿನ ಸೂರ್ಯನ ಬಿಸಿಲಿನಲ್ಲಿ ಒಣಗಿಸಿ. ನಂತರ ಇದನ್ನು ನಯವಾಗಿ ಪುಡಿಮಾಡಿಕೊಳ್ಳಿ. ಒಂದು ಗಾಳಿಯಾಡದ ಡಬ್ಬದಲ್ಲಿ ತುಂಬಿಸಿಕೊಳ್ಳಿ.
ಸ್ನಾನ ಮಾಡುವಾಗ ಎಷ್ಟು ಬೇಕೋ ಅಷ್ಟು ಇದನ್ನು ತೆಗೆದುಕೊಂಡು ಸ್ವಲ್ಪ ನೀರು ಸೇರಿಸಿ ಮೈಗೆ ಹಚ್ಚಿಕೊಂಡು ಸ್ನಾನ ಮಾಡಿ. ದಿನಾ ಉಪಯೋಗಿಸುವುದರಿಂದ ತ್ವಚೆಯ ಕಾಂತಿ ಹೆಚ್ಚಾಗುತ್ತದೆ. ಹಾಗೇ ಮೊಡವೆ, ತುರಿಕೆ, ಅಲರ್ಜಿ ಕೂಡ ಕಡಿಮೆಯಾಗುತ್ತದೆ.