ಮನೆಯಲ್ಲೇ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮಾಡೋದು ತುಂಬಾನೇ ಸುಲಭ. ಅಂಗಡಿಯಿಂದ ತರೋ ಬದಲು, ಮನೆಯಲ್ಲೇ ಮಾಡ್ಕೊಂಡ್ರೆ ಆರೋಗ್ಯಕ್ಕೂ ಒಳ್ಳೇದು. ಫ್ರಿಡ್ಜ್‌ನಲ್ಲಿಟ್ಟರೆ ತಿಂಗಳಾನುಗಟ್ಟಲೆ ಬಳಸಬಹುದು.
ಮೊದಲಿಗೆ ಶುಂಠಿ-ಬೆಳ್ಳುಳ್ಳಿಯನ್ನು ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು, ಬಿಸಿಲಿನಲ್ಲಿ ಒಣಗಿಸಿ. ನಂತರ ಮಿಕ್ಸಿಯಲ್ಲಿ ರುಬ್ಬುವಾಗ ನೀರನ್ನು ಸೇರಿಸಬೇಡಿ. ಸ್ವಲ್ಪ ಉಪ್ಪು, ಎಣ್ಣೆ ಮತ್ತು ವಿನೆಗರ್ ಸೇರಿಸಿ ರುಬ್ಬಿ. ಆಮೇಲೆ ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಡಿ.
ಇದರಿಂದ ಅಡುಗೆಗೂ ರುಚಿ, ಆರೋಗ್ಯಕ್ಕೂ ಒಳ್ಳೇದು. ಅಂಗಡಿಗಳಲ್ಲಿ ಸಿಗೋ ಪೇಸ್ಟ್‌ನಲ್ಲಿ ಕಲಬೆರಕೆ ಇರುತ್ತೆ. ಆದ್ರೆ, ಮನೆಯಲ್ಲಿ ಮಾಡ್ಕೊಂಡ್ರೆ ಶುದ್ಧವಾಗಿರುತ್ತೆ. ಶುಂಠಿ-ಬೆಳ್ಳುಳ್ಳಿ ಎರಡೂ ಆರೋಗ್ಯಕ್ಕೆ ತುಂಬಾ ಒಳ್ಳೆಯದು.”
ಆದರೆ ಮಾರುಕಟ್ಟೆಗಳಲ್ಲಿ ಲಭ್ಯವಿರುವ ಈ ಉತ್ಪನ್ನಕ್ಕೆ ಕೃತಕ ಬಣ್ಣ ಮತ್ತು ಅದು ಅನೇಕ ದಿನಗಳವರೆಗೆ ಕೆಡದಂತೆ ಇರಲು ಅದಕ್ಕೆ ಕೃತಕ ಸಂರಕ್ಷಕಗಳನ್ನು ಬೆರೆಸಿರುತ್ತಾರೆ. ಇದು ಖಂಡಿತವಾಗಿಯೂ ನಮ್ಮ ಆರೋಗ್ಯಕ್ಕೆ ಅಷ್ಟೇನು ಒಳ್ಳೆಯದಲ್ಲ.