ನಿಮ್ಮ ಮುಖವನ್ನು ಅಂದಗಾಣಿಸುವ ಕೆಲವಷ್ಟು ಫೇಸ್ ಸ್ಕ್ರಬ್ ಗಳನ್ನು ಮನೆಯಲ್ಲೇ ನೀವೇ ತಯಾರಿಸಬಹುದು. ಅದು ಹೇಗೆನ್ನುತ್ತೀರಾ?
ಪದೇ ಪದೇ ಮುಖ ತೊಳೆದರೆ ನಿಮ್ಮ ಮುಖದ ಮೇಲಿನ ತ್ವಚೆ ಶುದ್ಧವಾಗುತ್ತದೆಯೇ ಹೊರತು ತ್ವಚೆಯ ಒಳಗಿನಿಂದ ಡೆಡ್ ಸ್ಕಿನ್ ಗಳು ದೂರವಾಗುವುದಿಲ್ಲ. ಇವುಗಳನ್ನು ದೂರಮಾಡಲು ಸ್ಕ್ರಬ್ ನೆರವಾಗುತ್ತದೆ. ಮನೆಯಲ್ಲೇ ಮಾಡಬಹುದಾದ ಸ್ಕ್ರಬ್ ಗಳು ಖರ್ಚನ್ನೂ ಉಳಿಸುತ್ತವೆ. ಸೌಂದರ್ಯವನ್ನೂ ಹೆಚ್ಚಿಸುತ್ತವೆ.
ಗ್ರೌಂಡ್ ಕಾಫಿ ಸ್ಕ್ರಬ್ ತಯಾರಿಗಾಗಿ ಕಾಫಿ ಪುಡಿಯನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ನಿಮ್ಮ ಮುಖಕ್ಕೆ ನಿಧಾನವಾಗಿ ಸ್ಕ್ರಬ್ ಮಾಡಿ. ವಾರದಲ್ಲಿ ಎರಡು ಬಾರಿ ಇದನ್ನು ಮಾಡುವುದರಿಂದ ಉತ್ತಮ ಪರಿಣಾಮ ದೊರೆಯುತ್ತದೆ.
ಮುಖದ ಕಪ್ಪು ಕಲೆ ನಿವಾರಣೆಗೆ ಜೇನಿಗೆ ಸಕ್ಕರೆ, ನಿಂಬೆರಸ ಮತ್ತು ಆಲಿವ್ ಆಯಿಲ್ ಸೇರಿಸಿ ಮುಖಕ್ಕೆ ನಿಧಾನವಾಗಿ ತಿಕ್ಕಿ. ಹದಿನೈದು ನಿಮಿಷದ ಬಳಿಕ ತಣ್ಣೀರಿನಿಂದ ಮುಖ ತೊಳೆಯಿರಿ.
ಬೇಕಿಂಗ್ ಸೋಡಾ, ಓಟ್ಸ್ ಮೀಲ್ ಗಳನ್ನೂ ಇದೇ ರೀತಿ ಬಳಸುವುದರಿಂದ ನಿಮ್ಮ ಮುಖದ ಕಲೆಗಳು ದೂರವಾಗಿ ಆಕರ್ಷಕ ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.