ಮಕ್ಕಳಿಗೆ ಆರೋಗ್ಯಕರ ಆಹಾರ ತಿನ್ನಿಸೋದು ಸುಲಭದ ಕೆಲಸವಲ್ಲ. ಚಾಕೋಲೇಟ್, ಐಸ್ ಕ್ರೀಂಗಳನ್ನು ಇಷ್ಟಪಡುವ ಮಕ್ಕಳು ತರಕಾರಿ, ಹಣ್ಣಿನ ಹೆಸ್ರು ಕೇಳ್ತಿದ್ದಂತೆ ದೂರ ಓಡ್ತಾರೆ.
ಮಕ್ಕಳ ಆರೋಗ್ಯ ವೃದ್ಧಿಸುವ ಕಾರ್ನ್ ಬೇಲ್ ಮನೆಯಲ್ಲೇ ಮಾಡುವ ವಿಧಾನ ಇಲ್ಲಿದೆ.
ಕಾರ್ನ್ ಬೇಲ್ ಗೆ ಬೇಕಾಗುವ ಪದಾರ್ಥ:
2 ಕಪ್ ಬೇಯಿಸಿದ ಕಾರ್ನ್, 2 ಬೇಯಿಸಿದ ಆಲೂಗಡ್ಡೆ. 1/2 ಕಪ್ ನುಣ್ಣಗೆ ಕತ್ತರಿಸಿದ ಈರುಳ್ಳಿ. 1/2 ಕಪ್ ನುಣ್ಣಗೆ ಕತ್ತರಿಸಿದ ಟೋಮ್ಯಾಟೋ,1/2 ಕಪ್ ಕೊತ್ತಂಬರಿ ಸೊಪ್ಪು, 2 ಟೀಸ್ಪೂನ್ ಹುಣಿಸೆಹಣ್ಣಿನ ಸಾಸ್, 1 ಟೀಸ್ಪೂನ್ ಹಸಿರು ಚಟ್ನಿ, 2 ಟೀಸ್ಪೂನ್ ನಿಂಬೆ ರಸ, ರುಚಿಗೆ ತಕ್ಕಂತೆ ಉಪ್ಪು. 1/2 ಟೀಸ್ಪೂನ್ ಚಾಟ್ ಮಸಾಲಾ.
ಕಾರ್ನ್ ಬೇಲ್ ಮಾಡುವ ವಿಧಾನ: ಒಂದು ಪಾತ್ರೆಗೆ ಬೇಯಿಸಿದ ಕಾರ್ನ್ ಹಾಕಿ. ಅದಕ್ಕೆ ತುರಿದ ಆಲೂಗಡ್ಡೆಯನ್ನು ಹಾಕಿ. ನಂತ್ರ ಈರುಳ್ಳಿ, ಟೋಮ್ಯಾಟೋ, ಕೊತ್ತಂಬರಿ ಸೊಪ್ಪು, ಹುಣಸೆಹಣ್ಣಿನ ಸಾಸ್, ಹಸಿರು ಚಟ್ನಿ, ನಿಂಬೆ ರಸ, ಉಪ್ಪು ಹಾಗೂ ಚಾಟ್ ಮಸಾಲಾ ಹಾಕಿ ಮಿಕ್ಸ್ ಮಾಡಿ. ರುಚಿ ರುಚಿ ಕಾರ್ನ್ ಬೇಲ್ ಸಿದ್ಧ.