ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರು ಕೂದಲು ಮತ್ತು ಚರ್ಮದ ರಕ್ಷಣೆಗೆ ಅಲೋವೆರಾವನ್ನು ಬಳಸುತ್ತಾರೆ. ಯಾಕೆಂದರೆ ಅದರಲ್ಲಿರುವ ಅಂಶಗಳು ಕೂದಲು ಮತ್ತು ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಹಾಗಾಗಿ ಮನೆಯಲ್ಲಿಯೇ ಅಲೋವೆರಾ ಪೌಡರ್ ತಯಾರಿಸಿ ಬಳಸಿ.
ತಾಜಾ ಅಲೋವೆರಾ ಎಲೆಗಳನ್ನು ತೆಗೆದುಕೊಂಡು ಸ್ವಚ್ಚಗೊಳಿಸಿ ಸಣ್ಣ ತುಂಡುಗಳಾಗಿ ಕತ್ತರಿಸಿ. ಬಳಿಕ ಅದನ್ನು ಸೂರ್ಯನ ಬಿಸಿಲಿನಲ್ಲಿ ಒಣಗಿಸಿ. ಬಳಿಕ ಅದನ್ನು ಚೆನ್ನಾಗಿ ಪುಡಿಮಾಡಿ ಗಾಳಿಯಾಡದ ಬಾಟಲಿನಲ್ಲಿಡಿ. ಇದನ್ನು ಕೂದಲು ಹಾಗೂ ಚರ್ಮದ ಆರೈಕೆಗೆ ಬಳಸಿ.
*ಚರ್ಮದ ಹೊಳಪಿಗಾಗಿ ಈ ಪುಡಿಗೆ ಸ್ವಲ್ಪ ರೋಸ್ ವಾಟರ್ ಬೆರೆಸಿ ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ವಾಶ್ ಮಾಡಿ.
*ಮೊಡವೆ ಹಾಗೂ ಕಲೆಗಳನ್ನು ನಿವಾರಿಸಲು ಈ ಪುಡಿಯನ್ನು ಮುಲ್ತಾನಿ ಮಿಟ್ಟಿಯೊಂದಿಗೆ ಬೆರೆಸಿ ಮುಖಕ್ಕೆ ಹಚ್ಚಿ.
*ಮೃದುವಾದ ತುಟಿಗಳನ್ನು ಪಡೆಯಲು ಈ ಪುಡಿಗೆ ಜೇನುತುಪ್ಪ ಬೆರೆಸಿ ತುಟಿಗೆ ಹಚ್ಚಿ 15 ನಿಮಿಷ ಬಿಟ್ಟು ವಾಶ್ ಮಾಡಿ.
*ಉದ್ದವಾದ ಕೂದಲನ್ನು ಹೊಂದಲು ¼ ಕಪ್ ಅಲೋವೆರಾ ಪುಡಿಗೆ ½ ಕಪ್ ಆಮ್ಲಾ ಪುಡಿ, ½ ಕಪ್ ಮೆಂತ್ಯ ಪುಡಿ ಬೆರೆಸಿ ಕೂದಲಿಗೆ ಹಚ್ಚಿ.