ಬೇಕಾಗುವ ಸಾಮಾಗ್ರಿಗಳು : ಅಕ್ಕಿ ಹಿಟ್ಟು 1 ಕಪ್, ಮೈದಾಹಿಟ್ಟು 2 ಚಮಚ , ಒಣ ಕೊಬ್ಬರಿ 1/4 ಕಪ್, ಹುರಿದು ಪುಡಿ ಮಾಡಿದ ನೆಲಗಡಲೆ ಪುಡಿ 2 ಚಮಚ, ಹುರಿಗಡಲೆ 2 ಚಮಚ, ಇಂಗು ಚಿಟಕಿ, ಜೀರಿಗೆ 1 ಚಮಚ, ಹಸಿ ಮೆಣಸಿನಕಾಯಿ ಪೇಸ್ಟ್ 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.
ತಯಾರಿಸುವ ವಿಧಾನ : ಒಣ ಕೊಬ್ಬರಿಯನ್ನು ಸ್ವಲ್ಪ ಪುಡಿ ಮಾಡಿ ನಂತರ ಅಕ್ಕಿ ಹಿಟ್ಟು, ಮೈದಾ ಹಿಟ್ಟು, ಒಣ ಕೊಬ್ಬರಿ ಪುಡಿ, ನೆಲಗಡಲೆ ಪುಡಿ, ಹುರಿಗಡಲೆ ಪುಡಿ, ಜೀರಿಗೆ, ಹಸಿ ಮೆಣಸಿನ ಪೇಸ್ಟ್, ಇಂಗು ಎಲ್ಲಾ ಸಾಮಾಗ್ರಿಗಳನ್ನು ಸೇರಿಸಿ ಸ್ವಲ್ಪ ನೀರು ಹಾಕಿ ಗಟ್ಟಿಯಾಗಿ ಕಲೆಸಿ. ಎಣ್ಣೆ ಕಾಯಲು ಇಟ್ಟು ಕಲೆಸಿದ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆ ಮಾಡಿ, ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಪೇಪರ್ ಗೆ ಎಣ್ಣೆ ಸವರಿ ಉಂಡೆಗಳನ್ನು ಇಟ್ಟು ತಟ್ಟಿ ಕಾದ ಎಣ್ಣೆ ಗೆ ಹಾಕಿ ಕೆಂಪಗೆ ಕರಿದು ತೆಗೆಯಿರಿ. ಈಗ ಗರಿ ಗರಿ ನಿಪ್ಪಟ್ಟು ಸವಿಯಲು ರೆಡಿ.