ಕೈಲಾಗದು ಎಂದು ಕೈ ಕಟ್ಟಿ ಕುಳಿತರೆ ಆಗದು ಕೆಲಸವು ಮುಂದೆ….. ಎಂಬ ಕನ್ನಡ ಹಾಡು ಎಷ್ಟು ಅರ್ಥಪೂರ್ಣವಾಗಿದೆಯಲ್ವಾ….. ನಮ್ಮಿಂದ ಸಾಧ್ಯವಿಲ್ಲ ಎಂದು ನಾವು ಸುಮ್ಮನಿದ್ದು ಬಿಟ್ಟರೆ, ನಾವೇನು ಸಾಧಿಸೋಕೆ ಸಾಧ್ಯವೇ ಇಲ್ಲ. ಈ ಮಾತು ಯಾಕೆ ಹೇಳುತ್ತಿದ್ದೇವೆ ಅಂದ್ರೆ, ಇಲ್ಲೊಬ್ಬನ ಸ್ಪೂರ್ತಿದಾಯಕ ಕತೆಯಿದೆ ಮುಂದೆ ಓದಿ.
ರೊಮೇನಿಯಾ ದೇಶದ 37 ವರ್ಷದ ನಿಕ್ ಮೊಕುಟಾ ಎಂಬುವವರಿಗೆ ತಾನೇನಾದ್ರೂ ಸಾಧಿಸಬೇಕೆಂಬ ತುಡಿತ. ಇದಕ್ಕಾಗಿ ಪದವಿ ಪಡೆದಿದ್ದ ನಿಕ್ ತನ್ನ 21ನೇ ವಯಸ್ಸಿನಲ್ಲಿ ಜೇಬಿನಲ್ಲಿ 500 ಡಾಲರ್ ಇಟ್ಟುಕೊಂಡು ನೇರವಾಗಿ ಹೋಗಿದ್ದು ವಿಶ್ವದ ದೊಡ್ಡಣ್ಣ ಅಮೆರಿಕಾಕ್ಕೆ. ವಾಸಿಸಲು ಸೂರಿಲ್ಲದೆ ಪಾರ್ಕ್ ಗಳ ಬೆಂಚಿನ ಮೇಲೆ ಮಲಗಿದ್ದವರು ಇದೀಗ ಮಿಲಿಯನೇರ್ ಆಗಿದ್ದಾರೆ.
ಪೇರಲೆ ಎಲೆಯಲ್ಲಿದೆ ಸಾಕಷ್ಟು ‘ಔಷಧಿ’ ಗುಣ
ಹೌದು, ಫ್ಲಾಟ್ ನಲ್ಲಿ ತಂಗಲು ದುಡ್ಡಿಲ್ಲದ ಕಾರಣ ಸಾರ್ವಜನಿಕ ಉದ್ಯಾನವನಗಳ ಬೆಂಚುಗಳೇ ಇವರಿಗೆ ಮನೆಯಾಗಿತ್ತು. ನಿಕ್ ಪಾರ್ಕ್ ಗಳ ಬೆಂಚುಗಳಲ್ಲಿ ಮಲಗುತ್ತಿದ್ದರು. ಇಂಗ್ಲೀಷ್ ಭಾಷೆ ಕೂಡ ಸರಿಯಾಗಿ ಮಾತನಾಡಲು ಬರುತ್ತಿರಲಿಲ್ಲ. ಅಲ್ಲದೆ ಊಟ ಮಾಡುವಾಗ ಹಣದ ಖರ್ಚನ್ನು ಅತ್ಯಂತ ಕಡಿಮೆ ಮಾಡಿ ಎಚ್ಚರಿಕೆಯಿಂದ ತಿನ್ನಬೇಕಾಗಿತ್ತು. ಮೊದಲ ಬಾರಿಗೆ ನಗರಕ್ಕೆ ನಿಕ್, ಕ್ಯಾಬ್ ನಲ್ಲಿ ತೆರಳಿದಾಗ 100 ಕ್ಕೂ ಅಧಿಕ ಡಾಲರ್ ವೆಚ್ಚವಾಯ್ತಂತೆ. ಇದ್ರಿಂದ ಅವರಿಗೆ ಆಘಾತವಾಗಿತ್ತು.
ʼವಾಟ್ಸಾಪ್ʼ ಬಳಕೆದಾರರಿಗೆ ಮತ್ತೊಂದು ಗುಡ್ ನ್ಯೂಸ್
ನಿಕ್ ಸವೆದು ಬಂದ ಹಾದಿ ಮುಳ್ಳಿನ ಹಾಸಿಗೆಯಾಗಿತ್ತು. ಮೊದಲಿಗೆ ಇವರು ಕಾರುಗಳನ್ನು ಪಾರ್ಕಿಂಗ್ ಮಾಡುವಂತಹ ಸಣ್ಣ ಉದ್ಯೋಗಗಳನ್ನು ಹುಡುಕುವಲ್ಲಿ ಯಶಸ್ವಿಯಾದ್ರು. ನಂತರ ತನ್ನ ಇಂಗ್ಲೀಷ್ ಭಾಷೆಯೂ ಸುಧಾರಿಸಿತು. ಹೀಗಾಗಿ ರಿಯಲ್ ಎಸ್ಟೇಟ್ ಬ್ರೋಕರ್ ಪರವಾನಗಿಯನ್ನು ಪಡೆದ್ರು.
2013 ರಲ್ಲಿ, ನಿಕ್ ಆಮದು ಮಾಡಿದ ಎಲೆಕ್ಟ್ರಾನಿಕ್ಸ್ ಅನ್ನು ಇಬೇಯಲ್ಲಿ ಮಾರಾಟ ಮಾಡಲು ನಿರ್ಧರಿಸಿದ್ರು. ಇದರಿಂದ ಆರು ತಿಂಗಳೊಳಗೆ ಅವರು ತಿಂಗಳಿಗೆ $ 3,000 ರಿಂದ $ 4,000 ಗಳಿಸುತ್ತಿದ್ದರು. ಈಗ ನಿಕ್, ಅಮೆಜಾನ್ ಮತ್ತು ವಾಲ್ಮಾರ್ಟ್ನಂತಹ ಸೈಟ್ಗಳಲ್ಲಿ ಬಹು ಆನ್ಲೈನ್ ಸ್ಟೋರ್ಗಳನ್ನು ಹೊಂದಿದ್ದು, 40 ಮಿಲಿಯನ್ ಡಾಲರ್ ಆದಾಯವನ್ನು ಗಳಿಸುತ್ತಿದ್ದಾರೆ.
ಇದೀಗ ನಿಕ್ ಯುಎಸ್ ಪ್ರಜೆಯಾಗಿದ್ದು, ಯುಎಸ್ ಮತ್ತು ರೊಮೇನಿಯಾದಾದ್ಯಂತ ನೂರಾರು ಫ್ಲಾಟ್ಗಳನ್ನು ಹೊಂದಿದ್ದಾರೆ ಹಾಗೂ ಐಷಾರಾಮಿ ಕಾರುಗಳೂ ಸಹ ಇವರ ಬಳಿಯಿವೆ. ನಿಕ್ ತಂದೆ ವೃತ್ತಿಯಲ್ಲಿ ಅಕೌಂಟೆಂಟ್ ಆಗಿದ್ದು, ತಾಯಿ ಶಿಕ್ಷಕಿಯಾಗಿದ್ದರು. 500 ಡಾಲರ್ ಜೇಬಿಗಿರಿಸಿ ಅಮೆರಿಕಾಗೆ ವಲಸೆ ಬಂದು ಇಂದು ಮಿಲಿಯನೇರ್ ಆಗುವ ಮೂಲಕ ಯುವಕರಿಗೆ ಮಾದರಿಯಾಗಿದ್ದಾರೆ.