ತಲೆ ಮೇಲೊಂದು ಸೂರಿಲ್ಲದೆ ಬದುಕುವುದು ಹೇಳಿದಷ್ಟು ಸುಲಭವಲ್ಲ. ವಾಸಕ್ಕೆ ಮನೆಯಿಲ್ಲವೆಂದ್ರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಬಾಯ್ ಫ್ರೆಂಡ್ ನಿಂದ ದೂರವಾದ ಯುವತಿಯೊಬ್ಬಳಿಗೆ ಕಾರೇ ಈಗ ಮನೆಯಾಗಿದೆ.
ಯಸ್, ಇಂಗ್ಲೆಂಡ್ ಯುವತಿಯೊಬ್ಬಳು ತನ್ನ ನೋವನ್ನು ಹಂಚಿಕೊಂಡಿದ್ದಾಳೆ. ಆಕೆ ಹೆಸರು ಕರ್ಣ ಸ್ಟೀಫನ್ಸ್. ಕೆಂಟ್ ನ ಫೋಕ್ ಸ್ಟೋನ್ ನಲ್ಲಿ ವಾಸಿಸುತ್ತಿದ್ದಾಳೆ. ಕೊರಿಯರ್ ಕಂಪನಿಯಲ್ಲಿ ಡೆಲಿವರಿ ಗರ್ಲ್ ಆಗಿ ಕೆಲಸ ಮಾಡುತ್ತಿದ್ದಾಳೆ. ಮನೆ ಮನೆಗೆ ವಸ್ತುಗಳನ್ನು ಡಿಲೆವರಿ ಮಾಡುವ ಕಾರೇ ಈಕೆಗೆ ಮನೆ.
ವೆಂಡಿಂಗ್ ಯಂತ್ರಗಳ ಮೂಲಕ ಹಾಲಿಡೇ ತಾಣಗಳಿಗೆ ಟಿಕೆಟ್ ವಿತರಿಸುತ್ತಿರುವ ಏರ್‌ಲೈನ್
ಸ್ಟೀಪನ್ಸ್ ಗೆ ತಂದೆ ಮನೆಯಿದೆ. ಆದ್ರೆ ತಂದೆ ಮನೆಯಲ್ಲಿ ಸಹೋದರರು, ಸಹೋದರಿಯರೆಲ್ಲ ಇರುವ ಕಾರಣ ಜಾಗವಿಲ್ಲ. ಇದೇ ಕಾರಣಕ್ಕೆ ಆಕೆ ಬಾಯ್ ಫ್ರೆಂಡ್ ಫ್ಲಾಟ್ ಗೆ ಶಿಫ್ಟ್ ಆಗಿದ್ದಳಂತೆ. ಆದ್ರೆ ಬಾಯ್ ಫ್ರೆಂಡ್ ಜಗಳ ಮಾಡಿ ಆಕೆಯನ್ನು ಹೊರ ಹಾಕಿದ್ದನಂತೆ.
ಆತನ ಮನೆಯಿಂದ ಹೊರ ಬಂದ ಸ್ಟೀಪನ್ಸ್ ಗೆ ಉಳಿದುಕೊಳ್ಳಲು ಜಾಗವಿರಲಿಲ್ಲವಂತೆ. ಆಕೆಗೆ ಬರುವ ಸಂಬಳ, ಬಾಡಿಗೆ ನೀಡಲು ಸಾಕಾಗುವುದಿಲ್ಲವಂತೆ. ಅದೇ ಕಾರಣಕ್ಕೆ ಸ್ಟೀಪನ್ಸ್, ಕಾರನ್ನೇ ಮನೆ ಮಾಡಿಕೊಂಡಿದ್ದಾಳೆ. ಅಲ್ಲಿಯೇ ಆಕೆ ವಾಸ ಶುರು ಮಾಡಿದ್ದಾಳೆ.
ಮಕ್ಕಳಿಗಾಗಿ ವಿಮೆ ಪಾಲಿಸಿ ತೆಗೆದುಕೊಳ್ಳುವ ಮುನ್ನ ಇದು ತಿಳಿದಿರಲಿ
ಆಕೆ ಕಂಪನಿಯ ಸಿಬ್ಬಂದಿ, ಆಕೆ ಸಮಸ್ಯೆಗೆ ಸ್ಪಂದಿಸುತ್ತಿದ್ದಾರೆ. ಪ್ರತಿ ದಿನ ಸಮಯಕ್ಕಿಂತ ಬೇಗ ಬಾಗಿಲು ತೆರೆದು ಆಕೆಗೆ ನೆರವಾಗ್ತಿದ್ದಾರೆ. ಆದ್ರೆ ಕಾರಿನಲ್ಲಿ ವಾಸಿಸುವುದು ಭಯ ಹಾಗೂ ಮುಜುಗರ ಎರಡಕ್ಕೂ ಕಾರಣವಾಗಿದೆ ಎನ್ನುತ್ತಾಳೆ ಸ್ಟೀಪನ್ಸ್.