
ನಿನ್ನೆಯಿಂದ ಪಟ್ನಾದಲ್ಲಿ ಪ್ರೊ ಕಬಡ್ಡಿ ಪಂದ್ಯಗಳು ನಡೆಯುತ್ತಿದ್ದು, ಮೊದಲ ಪಂದ್ಯದಲ್ಲೇ ಪಟ್ನಾ ಪೈರೇಟ್ಸ್ ತಂಡ ಬೆಂಗಾಲ್ ವಾರಿಯರ್ಸ್ ಜೊತೆ ಜಯಭೇರಿಯಾಗುವ ಮೂಲಕ ಶುಭಾರಂಭ ಮಾಡಿದೆ. ಇಂದು ಪಟ್ನಾ ಪೈರೇಟ್ಸ್ ತನ್ನ ಮನೆಯ ಅಂಗಳದಲ್ಲಿ ಬಲಿಷ್ಠ ಪುಣೆ ರೀ ಪಲ್ಟಾನ್ ತಂಡವನ್ನು ಎದುರಿಸಲಿದೆ. ಆಲ್ ರೌಂಡರ್ ಗಳನ್ನು ಹೆಚ್ಚಾಗಿ ಹೊಂದಿರುವ ಪುಣೆ ರೀ ಪಲ್ಟಾನ್ ತಂಡದೊಂದಿಗೆ ಜಯಗಳಿಸುವುದು ತುಂಬಾ ಕಷ್ಟಕರವಾಗಿದೆ ಇದುವರೆಗೂ ಕೇವಲ ಎರಡು ಪಂದ್ಯಗಳಲ್ಲಿ ಈ ತಂಡ ಸೋಲು ಕಂಡಿದೆ.
ಇಂದು ಮೊದಲ ಪದ್ಯದಲ್ಲಿ ಪಟ್ನಾ ಪೈರೇಟ್ಸ್ ಮತ್ತು ಪುಣೆರಿ ಪಲ್ಟನ್ ಮುಖಾಮುಖಿಯಾದರೆ ಇನ್ನೊಂದು ಪಂದ್ಯದಲ್ಲಿ ದಬಾಂಗ್ ಡೆಲ್ಲಿ ಹಾಗೂ ಯುಪಿ ಯೋಧಾಸ್ ಸೆಣಸಾಡಲಿದ್ದು, ನಾರ್ತ್ ಡರ್ಬಿಯ ಯಾವ ತಂಡ ಜಯಭೇರಿಯಾಗಲಿದೆ ಕಾದು ನೋಡಬೇಕಾಗಿದೆ.