
ಪ್ರತಿಯೊಬ್ಬ ಮಹಿಳೆಯೂ ಸುಂದರ ತುಟಿ ಹೊಂದಲು ಬಯಸ್ತಾಳೆ. ತುಟಿ ಕೋಮಲವಾಗಿ, ಗುಲಾಬಿ ಬಣ್ಣದಲ್ಲಿದ್ದರೆ ಮಹಿಳೆ ಸೌಂದರ್ಯ ಇಮ್ಮಡಿಗೊಳ್ಳುತ್ತದೆ. ತುಟಿ ಬಣ್ಣ ಹೆಚ್ಚಿಸಲು ಮಾರುಕಟ್ಟೆಯಲ್ಲಿ ಸಾಕಷ್ಟು ಸೌಂದರ್ಯ ವರ್ಧಕಗಳು ಬಂದಿವೆ. ಆದ್ರೆ ಮನೆಯಲ್ಲಿಯೇ ಕೆಲ ಮದ್ದು ಮಾಡಿ ನೈಸರ್ಗಿಕವಾಗಿ ತುಟಿ ಬಣ್ಣವನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.
ಗುಲಾಬಿಯಂತಹ ಸುಂದರ ತುಟಿ ನಿಮ್ಮದಾಗಬೇಕೆಂದ್ರೆ ಪ್ರತಿ ದಿನ 8 ರಿಂದ 10 ಗ್ಲಾಸ್ ನೀರು ಸೇವನೆ ಮಾಡಿ. ಒಂದೇ ತಿಂಗಳಲ್ಲಿ ಇದ್ರ ಪರಿಣಾಮ ನೀವು ಕಾಣಬಹುದು. ತುಟಿ ಜೊತೆ ಚರ್ಮದಲ್ಲೂ ಬದಲಾವಣೆಯಾಗುತ್ತದೆ. ಕಡಿಮೆ ನೀರು ಕುಡಿದ್ರೆ ದೇಹ ತೇವಾಂಶ ಕಳೆದುಕೊಳ್ಳುತ್ತದೆ. ಇದ್ರಿಂದ ತುಟಿ ಸೇರಿದಂತೆ ಚರ್ಮ ಒಣಗುತ್ತದೆ. ಚಳಿಗಾಲದಲ್ಲಿ ಚರ್ಮ ಬಿರುಕು ಬಿಟ್ಟು ರಕ್ತ ಬರಲು ಇದೇ ಕಾರಣ.
ತುಟಿಗೆ ಲಿಪ್ಸ್ಟಿಕ್ ಹಚ್ಚುವ ಮೊದಲು ತುಟಿ ಒಣಗಿರದಂತೆ ನೋಡಿಕೊಳ್ಳಿ. ಲಿಪ್ಸ್ಟಿಕ್ ಹಚ್ಚುತ್ತಿದ್ದಂತೆ ತುಟಿ ಡ್ರೈ ಆಗುತ್ತದೆ. ಹಾಗಾಗಿ ಲಿಪ್ಸ್ಟಿಕ್ ಹಚ್ಚುವ ಮೊದಲು ತುಟಿಗೆ ಪೆಟ್ರೋಲಿಯಂ ಜಲ್ಲಿ, ಲಿಪ್ ಬಾಮ್, ತೆಂಗಿನ ಎಣ್ಣೆ ಅಥವಾ ಆಲಿವ್ ಆಯಿಲ್ ಹಚ್ಚಿಕೊಳ್ಳಿ. ಕೆಲವರ ತುಟಿ ಕಪ್ಪಗಿರುತ್ತದೆ. ಅವ್ರು ಲಿಪ್ ಬಾಮ್ ಬಳಸಬೇಕು. ನೆನಪಿರಲಿ ಲಿಪ್ ಬಾಮ್ ಎಸ್ಪಿಎಫ್ ನಿಂದ ಕೂಡಿರಲಿ.