ಗೊರಕೆ ಸಮಸ್ಯೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತದೆ. ನಿದ್ದೆಯಲ್ಲಿ ಗೊರಕೆ ಬಂದ್ರೆ ಅವರಿಗೇನೂ ಸಮಸ್ಯೆಯಿಲ್ಲ, ಆದ್ರೆ ಪಕ್ಕದಲ್ಲಿ ಮಲಗಿದ್ದವರು ನಿದ್ದೆ ಬರದೇ ಒದ್ದಾಡಿ ಹೋಗ್ತಾರೆ. ನಿದ್ರಿಸುವಾಗ ಮೂಗು ಮತ್ತು ಗಂಟಲಿನಲ್ಲಿ ಸರಿಯಾಗಿ ಗಾಳಿ ಸಂಚಾರವಾಗದೇ ಇದ್ದರೆ ಗೊರಕೆ ಬರುತ್ತದೆ.
ಗೊರಕೆ ಒಮ್ಮೊಮ್ಮೆ ಬೊಜ್ಜು, ಉಸಿರುಗಟ್ಟುವಿಕೆ, ಬಾಯಿ, ಗಂಟಲು, ಮೂಗಿನ ಸಮಸ್ಯೆ, ನಿದ್ರಾಹೀನತೆ ಇವುಗಳ ಸಂಕೇತವೂ ಆಗಿರುತ್ತದೆ. ಮಲಗುವ ಮುನ್ನ ಅತಿಯಾಗಿ ಮದ್ಯ ಸೇವಿಸಿದ್ರೆ, ಬೆನ್ನು ಅಡಿ ಮಾಡಿಕೊಂಡು ಮಲಗಿದ್ರೆ ಗೊರಕೆ ಬರುವುದು ಸಹಜ. ಗೊರಕೆಯನ್ನು ಸುಲಭವಾಗಿ ಹೋಗಲಾಡಿಸುವುದು ಹೇಗೆ ಅನ್ನೋದನ್ನು ನೋಡೋಣ.
ಅತಿಯಾದ ತೂಕ ಇರುವವರು ಹೆಚ್ಚಾಗಿ ಗೊರಕೆ ಹೊಡೆಯುತ್ತಾರೆ. ಹಾಗಾಗಿ ಅಂಥವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸಬೇಕು.
ಮಲಗುವ ಸಮಯದಲ್ಲಿ ಮದ್ಯ ಸೇವನೆ ಬೇಡ. ಮಲಗಲು 2 ಗಂಟೆಗಳಿಗಿಂತ ಹೆಚ್ಚು ಸಮಯವಿದೆ ಅಂದಾಗ ಮಾತ್ರ ಮದ್ಯ ಸೇವನೆ ಮಾಡಬಹುದು.
ನಿಮ್ಮ ನಿದ್ರಾ ಭಂಗಿಯನ್ನು ಬದಲಾಯಿಸಿಕೊಳ್ಳಿ. ಬೆನ್ನನ್ನು ಅಡಿ ಮಾಡಿ ಮಲಗುವ ಬದಲು, ಸೈಡ್ ಪೊಸಿಶನ್ ನಲ್ಲಿ ನಿದ್ರಿಸಿ.
ನಿಮ್ಮ ದೇಹದಲ್ಲಿ ಮೆಲಟೋನಿನ್ ಅಂಶ ಹೆಚ್ಚಾಗಿದ್ದರೆ ಗೊರಕೆ ಕಡಿಮೆಯಾಗುತ್ತದೆ. ಹಾಗಾಗಿ ಕಿತ್ತಳೆ, ಅನಾನಸ್ ಹಾಗೂ ಬಾಳೆಹಣ್ಣನ್ನು ತಿನ್ನಿ.
ತಲೆ ಎತ್ತರದಲ್ಲಿದ್ರೆ ಅಷ್ಟಾಗಿ ಗೊರಕೆ ಬರುವುದಿಲ್ಲ. ಹಾಗಾಗಿ ಎಕ್ಸ್ ಟ್ರಾ ದಿಂಬನ್ನು ಬಳಸಿ, ಮಾರುಕಟ್ಟೆಯಲ್ಲಿ ಸಹ ಪ್ರತ್ಯೇಕ ದಿಂಬುಗಳು ಲಭ್ಯವಿವೆ.
ಧೂಮಪಾನ ಮಾಡಿದ್ರೆ ಗೊರಕೆ ಸಮಸ್ಯೆ ಹೆಚ್ಚು, ಹಾಗಾಗಿ ಧೂಮಪಾನ ನಿಲ್ಲಿಸಿಬಿಡಿ.
ದಿನಕ್ಕೆರಡು ಬಾರಿ ಶುಂಠಿ ಹಾಗೂ ಜೇನುತುಪ್ಪದ ಚಹಾ ಮಾಡಿ ಕುಡಿಯುವುದರಿಂದ ಗೊರಕೆ ಕಡಿಮೆ ಮಾಡಿಕೊಳ್ಳಬಹುದು.
ಉದ್ರೇಕಕಾರಿ ಔಷಧಗಳು ಹಾಗೂ ನಿದ್ದೆ ಮಾತ್ರೆಯನ್ನು ಸೇವಿಸಬೇಡಿ, ಇವು ಕೂಡ ಗೊರಕೆಗೆ ಕಾರಣವಾಗುತ್ತವೆ.
ಡೈರಿ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸಬೇಡಿ. ಡಿಹೈಡ್ರೇಶನ್ ಕೂಡ ಗೊರಕೆಗೆ ಕಾರಣ. ಹಾಗಾಗಿ ಪುರುಷರು 3.7 ಲೀಟರ್ ಮತ್ತು ಮಹಿಳೆಯರು 2.7 ಲೀಟರ್ ನೀರನ್ನು ಕುಡಿಯಬೇಕು.