
ಬಾಳೆಹಣ್ಣಿನಷ್ಟೇ ಪ್ರಯೋಜನ ಬಾಳೆಕಾಯಿಯಿಂದಲೂ ಇದೆ. ಹಸಿ ಬಾಳೆಕಾಯಿಯಲ್ಲಿರುವ ಆರೋಗ್ಯಕರ ಅಂಶಗಳ ಬಗ್ಗೆ ತಿಳಿಯೋಣ.
ಬಾಳೆಕಾಯಿಯನ್ನು ಹಸಿಯಾಗಿ ತಿನ್ನಲು ಸಾಧ್ಯವಿಲ್ಲ. ಆದರೆ ಅದರಿಂದ ತಯಾರಿಸುವ ಪದಾರ್ಥಗಳು ದೇಹದ ಆರೋಗ್ಯವನ್ನು ಕಾಪಾಡುತ್ತವೆ. ಬಾಳೆಕಾಯಿಯ ಪಲ್ಯ, ಬಜ್ಜಿ, ಚಿಪ್ಸ್ ಇಷ್ಟಪಡದವರಿಲ್ಲ. ಮಧುಮೇಹಿಗಳಿಗೆ ಬಾಳೆಕಾಯಿ ಹೇಳಿ ಮಾಡಿಸಿದ ಆಹಾರ. ಇದನ್ನು ಸಂಶೋಧನೆಗಳು ದೃಢಪಡಿಸಿವೆ.
ಇದು ತೂಕ ಇಳಿಸಲು ನೆರವಾಗುತ್ತದೆ. ಬಾಳೆಕಾಯಿ ಯಲ್ಲಿರುವ ಪಿಷ್ಟ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳು ದೈಹಿಕ ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುತ್ತದೆ. ಹೆಚ್ಚಿನ ಪ್ರಮಾಣದ ಫೈಬರ್ ಹೊಂದಿರುವ ಬಾಳೆಕಾಯಿ, ಜೀರ್ಣಕ್ರಿಯೆಯನ್ನು ಸುಧಾರಿಸಿ ಕರುಳಿನ ಚಲನೆಯನ್ನು ಸುಲಭವಾಗಿಸುತ್ತದೆ. ಬಾಳೆಕಾಯಿಯಲ್ಲಿ ಪೊಟ್ಯಾಶಿಯಂ ಅಧಿಕವಾಗಿದ್ದು ನರಗಳ ಕಾರ್ಯಕ್ಷಮತೆಯನ್ನು ವೃದ್ಧಿಸುತ್ತದೆ.
ಎರಡನೇ ಹಂತದ ಮಧುಮೇಹ ನಿಯಂತ್ರಿಸಲು ಹಸಿರು ಬಾಳೆಕಾಯಿ ಅತ್ಯುತ್ತಮವಾಗಿ ಕೆಲಸ ಮಾಡುತ್ತದೆ. ಹಸಿರು ಬಾಳೆಕಾಯಿಯಲ್ಲಿ ವಿಟಮಿನ್ ಬಿ 6 ಅಂಶಗಳು ಹೇರಳವಾಗಿವೆ. ವಿಟಮಿನ್ ಬಿ 6, ಹಿಮೋಗ್ಲೋಬಿನ್ ಉತ್ಪಾದನೆ ಮಾಡುತ್ತದೆ.