ಯುಕೆಯಲ್ಲಿ 15 ವರ್ಷದ ಬಾಲಕನೊಬ್ಬ ತನ್ನ ಶಿಶ್ನದೊಳಗೆ ಸಿಲುಕಿಸಿಕೊಂಡ ಯುಎಸ್ಬಿ ಕೇಬಲ್ ತೆಗೆಯಲು ಆಪರೇಷನ್ ಮಾಡಲಾಗಿದೆ.
ಆತ ತನ್ನ ಲೈಂಗಿಕ ತೃಷೆ ತೀರಿಸಿಕೊಳ್ಳಲು ಯುಎಸ್ಬಿ ಕೇಬಲ್ ಅನ್ನು ತನ್ನ ಶಿಶ್ನದ ಒಳಭಾಗಕ್ಕೆ ತುರುಕಿಕೊಂಡಿದ್ದ. ನಂತರ ತಂತಿ ಸಿಕ್ಕಿಹಾಕಿಕೊಂಡಿದ್ದು, ಅದನ್ನು ತೆಗೆದುಹಾಕಲು ಸಾಧ್ಯವಾಗಲಿಲ್ಲ.
ತಂತಿ ಸಿಕ್ಕಿಕೊಂಡಿದ್ದರಿಂದ ಮೂತ್ರ ವಿಸರ್ಜನೆಯ ಸಮಯದಲ್ಲಿ ರಕ್ತ ಬರಲಾರಂಭಿಸಿದೆ. ಹೀಗಾಗಿ ಆತನ ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದರು.
ವಾಸ್ತವವಾಗಿ ಏನಾಯಿತು ಎಂದು ವೈದ್ಯರಿಗೆ ತಿಳಿಸಲು ಆತ ತನ್ನ ತಾಯಿ ವೈದ್ಯರ ಕೊಠಡಿಯಿಂದ ಹೊರ ಹೋಗುವವರೆಗೂ ಕಾಯ್ದಿದ್ದ. ಬಳಿಕ ನಡೆದ ಘಟನೆ ವಿವರಿಸಿದ್ದಾನೆ.
ಯುಎಸ್ಬಿ ವೈರ್ನ ಎರಡು ಪೋರ್ಟ್ಗಳು ಬಾಹ್ಯ ಮೂತ್ರನಾಳದಿಂದ ಚಾಚಿಕೊಂಡಿದ್ದು, ತಂತಿಯ ಮಧ್ಯ ಭಾಗವು ಒಳಗೆ ಉಳಿದಿದಿತ್ತು. ವೈದ್ಯರು ಮೊದಲು ಲೋಹದ ರಾಡ್ ಸಹಾಯದಿಂದ ಗಂಟು ಬಿದ್ದ ಬಳ್ಳಿಯನ್ನು ತೆಗೆದುಹಾಕಲು ಪ್ರಯತ್ನಿಸಿದ್ದರು. ಆದರೆ ತಂತಿಯ ಗಂಟುಗಳ ಕಾರಣದಿಂದಾಗಿ ಅದು ಸಾಧ್ಯವಾಗಲಿಲ್ಲ. ನಂತರ ಅವರು ತಂತಿಯನ್ನು ತೆಗೆದುಹಾಕಲು ಹುಡುಗನಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಬಾಲಕನನ್ನು ದೀರ್ಘಾವಧಿಯಲ್ಲಿ ಮೇಲ್ವಿಚಾರಣೆ ಮಾಡಬೇಕಾಗುತ್ತದೆ.