ಸಾಮಾಜಿಕ ಜಾಲತಾಣದ ಹೊಸ ಸರಕು ಬಂದಿದೆ. ಆಪ್ಟಿಕಲ್ ಇಲ್ಯೂಷನ್ಗೆ ಸಂಬಂಧಪಟ್ಟಂತೆ ಒಂದು ಸವಾಲು ಇದ್ದು, ಕಟ್ಟಡವೊಂದರ ಫೋಟೋದಲ್ಲಿ ಕುದುರೆಯೊಂದು ಅಡಗಿದ್ದು ಅದನ್ನು 15 ಸೆಕೆಂಡುಗಳೊಳಗೆ ಹುಡುಕುವ ಕೆಲಸವನ್ನು ಜಾಲತಾಣಿಗರು ಮಾಡಬೇಕಿದೆ.
ಹೆಚ್ಚಿನ ಜನರಿಗೆ ಫೋಟೋವು ಕೆಂಪು ಇಟ್ಟಿಗೆ ಕಟ್ಟಡದೊಂದಿಗೆ ಆಕರ್ಷಕ ಸುತ್ತಮುತ್ತಲ ಪ್ರದೇಶ ಹೊಂದಿದೆ. ಅದರ ಅಡಿಯಲ್ಲಿ ಎರಡು ಕಾರುಗಳನ್ನು ನಿಲ್ಲಿಸಲಾಗಿದೆ. ಆದರೆ, ಕಣ್ಣಿಗೆ ಕಾಣದಂತೆ ಕುದುರೆಯೂ ಅಡಗಿದೆ. ಮತ್ತೊಮ್ಮೆ ಚಿತ್ರವನ್ನು ಕಣ್ಣಿನಿಂದ ಸ್ಕ್ಯಾನ್ ಮಾಡಿ ಮತ್ತು 15 ಸೆಕೆಂಡುಗಳಲ್ಲಿ ಕುದುರೆಯನ್ನು ಪತ್ತೆಹಚ್ಚಲು ಪ್ರಯತ್ನಿಸಬಹುದು.
ಫೋಟೋದಲ್ಲಿನ ಪ್ರಮುಖ ಅಂಶಗಳು ಸುಲಭವಾಗಿ ಗೋಚರಿಸುತ್ತವೆಯಾದರೂ, ಕುದುರೆಯು ಸಾಕಷ್ಟು ಅಸ್ಪಷ್ಟವಾಗಿದೆ. ಈ ಹುಡುಕುವ ಸಾಹಸಕ್ಕೆ ನೀವು ಬದ್ಧರಾಗಿದ್ದರೆ ಕೆಲವು ಸುಳಿವುಗಳನ್ನು ನೀಡಬಹುದು. ಕುದುರೆಯು ಬಿಳಿ ಬಣ್ಣದ್ದಾಗಿದ್ದು ನೆಲದ ಮೇಲೆ ಇಲ್ಲ ಎಂಬುದು ಮೊದಲ ಸುಳಿವು.
ಈಗಲೂ ಸಿಗಲಿಲ್ಲವೇ, ಎರಡನೇ ಸುಳಿವೆಂದರೆ ಕುದುರೆಯು ಕೆಂಪು ಕಟ್ಟಡದಲ್ಲಿ ಕಿಟಕಿಯೊಂದರಿಂದ ಇಣುಕುತ್ತಿದೆ. ನೀವು ಈಗ ಮಾಡಬೇಕಾಗಿರುವುದು ಕುದುರೆಯನ್ನು ಕಣ್ಣುತುಂಬಿಕೊಳ್ಳಲು ಕಟ್ಟಡದ ವಿಂಡೋವನ್ನು ಸ್ಕ್ಯಾನ್ ಮಾಡಿ.
ಕೊನೆಗೂ ಸಿಕ್ಕಿತೇ, ಸ್ಟಾಲಿಯನ್ ಕಟ್ಟಡದ ಎರಡನೇ ಮಹಡಿಯ ಎರಡನೇ ಕಿಟಕಿಯಲ್ಲಿದೆ ಆ ಕುದುರೆ. ಈ ಫೋಟೋ ಸಾಕಷ್ಟು ಸ್ವಾಭಾವಿಕವಾಗಿ ಕಂಡುಬಂದರೂ, ಕುದುರೆಯಷ್ಟು ದೊಡ್ಡ ಪ್ರಾಣಿಯನ್ನು ಗುರುತಿಸಲು ಕಷ್ಟವಾಗಬಹುದು ಎಂದು ಯಾರೂ ಸಹ ನಿರೀಕ್ಷಿಸಿರುವುದಿಲ್ಲ.