ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ಲಸಿಕೆ ಪಡೆದುಕೊಂಡ ಪ್ರಮಾಣಪತ್ರವನ್ನು ಪೋಸ್ಟ್ ಮಾಡಬೇಡಿ.
ಹೀಗೆಂದು ಕೇಂದ್ರ ಗೃಹ ಸಚಿವಾಲಯ ನಿರ್ವಹಿಸುತ್ತಿರುವ ‘ಸೈಬರ್ ದೋಸ್ತ್’ ಟ್ವಿಟರ್ ಹ್ಯಾಂಡಲ್ ನಿಂದ ಎಚ್ಚರಿಕೆ ನೀಡಲಾಗಿದೆ. ಅನೇಕರು ತಾವು ಲಸಿಕೆ ಹಾಕಿಸಿಕೊಂಡ ಫೋಟೋ, ಸರ್ಟಿಫಿಕೇಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ರೀತಿ ಲಸಿಕೆ ಪಡೆದ ಸರ್ಟಿಫಿಕೇಟ್ ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಚ್ಚಿಕೊಳ್ಳಬಾರದು.
ಸರ್ಟಿಫಿಕೇಟ್ ನಲ್ಲಿ ಲಸಿಕೆ ಹಾಕಿಸಿಕೊಂಡವರ ಹೆಸರು, ಆಧಾರ್ ಮಾಹಿತಿ ಸೇರಿದಂತೆ ವೈಯಕ್ತಿಕ ವಿವರಗಳು ಇರುವುದರಿಂದ ವಂಚಕರು ಅವನ್ನು ಬಳಸಿಕೊಂಡು ದುರ್ಬಳಕೆ ಮಾಡಿಕೊಳ್ಳಬಹುದಾದ ಸಾಧ್ಯತೆ ಇರುತ್ತದೆ. ಹೀಗಾಗಿ ಯಾರೂ ವ್ಯಾಕ್ಸಿನ್ ಪಡೆದ ಸರ್ಟಿಫಿಕೇಟ್ಗಳನ್ನು ಹಂಚಿಕೊಳ್ಳಬಾರದು ಎಂದು ‘ಸೈಬರ್ ದೋಸ್ತ್’ ಎಚ್ಚರಿಕೆ ನೀಡಿದೆ.