![](https://kannadadunia.com/wp-content/uploads/2019/11/Parameshwar-High-Command_710x400xt.jpg)
ಬೆಂಗಳೂರು : ಯಾರೇ ಕಾನೂನು ಉಲ್ಲಂಘಿಸಿದ್ರೂ ನಾವು ಸುಮ್ಮನಿರಲ್ಲ, ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಕರವೇ ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾನೂನನ್ನು ಯಾರೇ ಉಲ್ಲಂಘಿಸಿದ್ರೂ ನಾವು ಸುಮ್ಮನಿರಲ್ಲ, ನಾವು ಯಾರ ಪರವಾಗಿಯೂ ಇಲ್ಲ. ವಿರೋಧವೂ ಇಲ್ಲ,ನಮ್ಮ ಸರ್ಕಾರ ಕನ್ನಡದ ಪರ ನಿಂತಿದೆ ಎಂದು ಹೇಳಿದ್ದಾರೆ.
ಕನ್ನಡ ಅನುಷ್ಠಾನದ ಬಗ್ಗೆ ಹಲವು ಬಾರಿ ತೀರ್ಮಾನ ಮಾಡಿದ್ದೇವೆ. ಕಡ್ಡಾಯ ಮಾಡುವುದಕ್ಕೆ ನಾವು ಸೂಚನೆ ಕೊಟ್ಟಿದ್ದೇವೆ. ಬಿಬಿಎಂಪಿ ಫೆಬ್ರವರಿ ೨೮ ರವರೆಗೆ ಗಡುವು ನೀಡಿದೆ. ಕಡ್ಡಾಯ ಮಾಡುತ್ತೇವೆ. ಸ್ವಲ್ಪ ಸಂಯದಿಂದ ಇರಬೇಕು. ಸಾರ್ವಜನಿಕರಿಗೆ ಧಕ್ಕೆ ತರುವ ಕೆಲಸ ಮಾಡಬಾರದಿತ್ತು. ಅದಕ್ಕಾಗಿ ನಮ್ಮ ಪೊಲೀಸರು ಕ್ರಮ ತೆಗೆದುಕೊಂಡಿದ್ದಾರೆ ಎಂದರು.