ಗುಲಾಬ್ ಜಾಮೂನ್ ಕಸ್ಟರ್ಡ್ ಗೆ ಬೇಕಾಗುವ ಪದಾರ್ಥ:
ಹಾಲು – 80 ಮಿ.ಲೀ.
ಕಸ್ಟರ್ಡ್ ಪುಡಿ – 25 ಗ್ರಾಂ
ಹಾಲು – 1 ಲೀಟರ್
ಸಕ್ಕರೆ – 110 ಗ್ರಾಂ
ಏಲಕ್ಕಿ ಬೀಜ – 1/4 ಚಮಚ
ಗುಲಾಬ್ ಜಾಮೂನ್ ಕಸ್ಟರ್ಡ್ ಮಾಡುವ ವಿಧಾನ :
ಮೊದಲು 80 ಮಿಲಿ ಹಾಲನ್ನು ಒಂದು ಪಾತ್ರೆಗೆ ಹಾಕಿ. ಅದಕ್ಕೆ ಕಸ್ಟರ್ಡ್ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪಕ್ಕಕ್ಕಿಡಿ. ಇನ್ನೊಂದು ಪಾತ್ರೆಯಲ್ಲಿ 1 ಲೀಟರ್ ಹಾಲನ್ನು ತೆಗೆದುಕೊಂಡು ಬಿಸಿ ಮಾಡಿ.
2019ಅದಕ್ಕೆ ಕಸ್ಟರ್ಡ್ ಪುಡಿ ಹಾಕಿದ ಹಾಲನ್ನು ಹಾಕಿ ಚೆನ್ನಾಗಿ ಕೈ ಆಡುತ್ತಿರಿ. ಹಾಲು ಗಟ್ಟಿಯಾಗ್ತಿದ್ದಂತೆ ಸಕ್ಕರೆ ಹಾಗೂ ಏಲಕ್ಕಿ ಪುಡಿಯನ್ನು ಹಾಕಿ. ಇದನ್ನು 1 ಗಂಟೆಗಳ ಕಾಲ ಫ್ರಿಜ್ ನಲ್ಲಿಡಿ. ನಂತ್ರ ಗುಲಾಬ್ ಜಾಮೂನ್ ಜೊತೆ ಇದನ್ನು ಸರ್ವ್ ಮಾಡಿ.