ದೀಪಾವಳಿ ಹತ್ತಿರ ಬರ್ತಿದ್ದಂತೆ ಬ್ಯಾಂಕ್ ಸೇರಿದಂತೆ ಅನೇಕ ಕಂಪನಿಗಳು ಭರ್ಜರಿ ಆಫರ್ ನೀಡ್ತಿವೆ. ಅದ್ರಲ್ಲಿ ದೇಶದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾಗಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಒಂದು. ದೀಪಾವಳಿಗೂ ಮುನ್ನವೇ ಬ್ಯಾಂಕ್, ಅಗ್ಗದ ಗೃಹ ಸಾಲದ ಉಡುಗೊರೆ ನೀಡಿದೆ.
ಬ್ಯಾಂಕ್, ಗೃಹ ಸಾಲದ ಬಡ್ಡಿದರದಲ್ಲಿ ಇಳಿಕೆ ಮಾಡಿದೆ. ಇದ್ರ ನಂತ್ರ ಬ್ಯಾಂಕಿನ ಗೃಹ ಸಾಲದ ದರವು ಶೇಕಡಾ 6.40ಕ್ಕೆ ಇಳಿದಿದೆ. ಹೊಸ ದರಗಳು ಇಂದಿನಿಂದಲೇ ಜಾರಿಗೆ ಬಂದಿವೆ. ಹೊಸ ಸಾಲಕ್ಕೆ ಅರ್ಜಿ ಸಲ್ಲಿಸುವವರು ಹಾಗೂ ಸಾಲವನ್ನು ವರ್ಗಾವಣೆ ಮಾಡುವವರು ಇದ್ರ ಲಾಭ ಪಡೆಯಲಿದ್ದಾರೆ.
ಯೂನಿಯನ್ ಬ್ಯಾಂಕ್ ಈ ಹಿಂದೆ ಗೃಹ ಸಾಲಗಳು ಸೇರಿದಂತೆ ಎಲ್ಲಾ ರೀತಿಯ ಸಾಲಗಳ ಬಡ್ಡಿದರಗಳನ್ನು ಸೆಪ್ಟೆಂಬರ್ 8ರಂದು ಬದಲಾವಣೆ ಮಾಡಿತ್ತು. ಬ್ಯಾಂಕ್‌ನ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, 700 ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರ್‌ಗಳ ಮೇಲಿನ 30 ಲಕ್ಷ ರೂಪಾಯಿವರೆಗಿನ ಗೃಹ ಸಾಲದ ಬಡ್ಡಿ ದರವು ಶೇಕಡಾ 6.85 ಆಗಿದೆ. ಮಹಿಳೆಯರಿಗೆ ಗೃಹ ಸಾಲದ ಮೇಲಿನ ಬಡ್ಡಿದರದ ಮೇಲೆ ಶೇಕಡಾ 05ರಷ್ಟು ರಿಯಾಯಿತಿ ಸಿಗಲಿದೆ.