ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿತೇ ? ಸಿಸಿಟಿವಿ ದೃಶ್ಯಾವಳಿ ಕೊಲೆಗಡುಕರ ಕುರಿತ ಸುಳಿವು ಕೊಟ್ಟಿದೆಯೇ ? ವರದಿಯೊಂದರ ಪ್ರಕಾರ, ಸಿಸಿ ಟಿವಿ ದೃಶ್ಯಾವಳಿ ಸುಳಿವು ನೀಡಿರುವುದು ಹೌದು.
ಸಿಧು ಮೂಸೆವಾಲಾ ಹತ್ಯೆ ನಡೆದ ಮೇ 29ರ ಸಿಸಿ ಟಿವಿ ದೃಶ್ಯಾವಳಿಯಲ್ಲಿ ಮೂಸೆವಾಲಾರ ಜೀಪ್ ಬಳಿ ಕೆಲವರು ನಿಂತು ಸೆಲ್ಫಿ ತೆಗೆದುಕೊಳ್ಳುವ ದೃಶ್ಯ ದಾಖಲಾಗಿದೆ.
ಗಾಯಕ ಮೂಸೆವಾಲಾ ಸ್ಥಳದಿಂದ ನಿರ್ಗಮಿಸಿದ ಬಳಿಕ, ಈ ಪೈಕಿ ಇಬ್ಬರು ಶೂಟರ್‌ಗಳಿಗೆ ಮಾಹಿತಿ ನೀಡಿದ್ದಾರೆ.
ಸಿಧು ಮೂಸೆವಾಲಾ ಹತ್ಯೆ ನಡೆಯುವುದಕ್ಕೆ ಕೆಲವು ನಿಮಿಷಗಳ ಮೊದಲು ಮಾನ್ಸಾದಲ್ಲಿ ದಾಖಲಾದ ಸಿಸಿ ಟಿವಿ ದೃಶ್ಯದಲ್ಲಿರುವ ವ್ಯಕ್ತಿಗಳ ಪೈಕಿ ಒಬ್ಬಾತನನ್ನು ಕೇಕಡಾ ಎಂದು ಗುರುತಿಸಲಾಗಿದೆ. ಗಾಯಕನ ಅಭಿಮಾನಿಯಂತೆ ನಟಿಸಿರುವ ಈತ 40 ನಿಮಿಷ ಮೂಸೆವಾಲಾ ಮನೆಯಲ್ಲಿದ್ದ. ಗಾಯಕನೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದ ಎಂದು ಪಂಜಾಬ್ ಪೊಲೀಸ್ ಮೂಲಗಳು ತಿಳಿಸಿವೆ.
ʼಆಧಾರ್ʼ ವಂಚನೆಗೊಳಗಾಗಿದ್ದೀರಾ ? ಹಾಗಾದ್ರೆ ಅದನ್ನು ತಡೆಯಲು ಇಲ್ಲಿದೆ ಸಪ್ತ ಸೂತ್ರ
ಮೂಸೆವಾಲಾ ಹತ್ಯೆ ಪ್ರಕರಣದಲ್ಲಿ ಎಂಟು ಶೂಟರ್‌ಗಳು ಭಾಗಿಯಾಗಿದ್ಧಾರೆ ಹಾಗೂ ಅವರನ್ನು ಗುರುತಿಸಲಾಗಿದೆ. ವಾಸ್ತವವಾಗಿ, ಮೂಸೆವಾಲಾ ತನ್ನ ಬುಲೆಟ್ ಪ್ರೂಫ್ ವಾಹನ ಬಿಟ್ಟು ಥಾರ್ ವಾಹನದಲ್ಲಿ ಪ್ರಯಾಣಿಸುತ್ತಿದ್ದಾರೆ. ಭದ್ರತೆಯೂ ಇಲ್ಲ ಎಂದು ಶೂಟರ್‌ಗಳಿಗೆ ಮಾಹಿತಿ ನೀಡಿದ್ದು ಇದೇ ಕೇಕಡಾ. ಈತನನ್ನು ಈಗಾಗಲೇ ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.