ಬೆಂಗಳೂರು: ಈ ವರ್ಷ ಕೊರೋನಾ ಕಾರಣದಿಂದ ಬೇಸಿಗೆ ರಜೆ ಕಡಿತಗೊಳಿಸುವ ಸಾಧ್ಯತೆ ಇದೆ. ಸೀಮಿತ ಅವಧಿಯಲ್ಲಿ ಪಠ್ಯಕ್ರಮ ಮುಗಿಸುವ ಅನಿವಾರ್ಯತೆ ಎದುರಾಗಿರುವುದರಿಂದ ಈ ವರ್ಷ ಬೇಸಿಗೆ ರಜೆ ಇರುವುದಿಲ್ಲ ಎಂದು ಹೇಳಲಾಗಿದೆ.
ಶಾಲೆಗಳ ಆರಂಭ ಕುರಿತಂತೆ ಶೀಘ್ರವೇ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಕೋವಿಡ್ ನಿಯಮಾನುಸಾರ ಶಾಲೆಗಳನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ.
ಜನವರಿಯಲ್ಲಿ ಶೈಕ್ಷಣಿಕ ವರ್ಷ ಆರಂಭವಾಗಲಿದ್ದು, ಮೇ ಜೂನ್, ಜುಲೈ ಒಳಗೆ ಪಠ್ಯ, ಪರೀಕ್ಷೆಗಳನ್ನು ಪೂರ್ಣಗೊಳಿಸಬೇಕಿದೆ. ಬೇಸಿಗೆ ರಜೆ ನೀಡದೆ ಶಾಲೆಗಳನ್ನು ನಡೆಸುವ ಕುರಿತು ಚರ್ಚೆ ನಡೆಸಲಾಗಿದೆ. ಪಠ್ಯ ಕಡಿತಗೊಳಿಸಿ ಸೀಮಿತ ಅವಧಿಯಲ್ಲಿ ಶಾಲೆಗಳನ್ನು ನಡೆಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಕೊರೋನಾ ಕಾರಣದಿಂದಾಗಿ ಈ ಸಾಲಿನ ಶೈಕ್ಷಣಿಕ ವರ್ಷವೇ ಆರಂಭವಾಗಿಲ್ಲ. ಹಾಗಾಗಿ, ವರ್ಷ ಬೇಸಿಗೆ ರಜೆ ಇರುವುದಿಲ್ಲ ಎಂದು ಹೇಳಲಾಗಿದೆ. ಬೇಸಿಗೆ ರಜೆಯನ್ನು ಸಂಪೂರ್ಣ ಕಡಿತ ಮಾಡದೆ ಕನಿಷ್ಠ 15 ರಿಂದ 20 ದಿನಗಳ ರಜೆ ನೀಡಬೇಕೆಂದು ಶಿಕ್ಷಕರ ಸಂಘದ ಪ್ರತಿನಿಧಿಗಳು ಹೇಳಿದ್ದಾರೆ.