ಮೊಬೈಲ್ ಫೋನ್ ಭಾರತಕ್ಕೆ ಬಂದಾಗ ಮೊದಲು ಫೇಮಸ್ ಆಗಿದ್ದೇ ನೋಕಿಯಾ ಮೊಬೈಲ್ ಗಳು. ನಂತರದ ದಿನಗಳಲ್ಲಿ ಬೇರೆಬೇರೆ ಮೊಬೈಲ್ ಬ್ರಾಂಡ್ಗಳು ಶುರುವಾದ ನಂತರ ಅತಿ ಹೆಚ್ಚು ಜನಪ್ರಿಯತೆ ಗಳಿಸಿದ್ದ ನೋಕಿಯಾದ ಕ್ರೇಜ್ ಕ್ರಮೇಣ ಕಡಿಮೆಯಾಯಿತು.
ಆದರೆ ಇದೀಗ ಮತ್ತೆ ನೋಕಿಯಾ ಮೊಬೈಲ್ ಸದ್ದು ಮಾಡ್ತಿದೆ. ಕಾರಣ ಕೆಲವು ದಿನಗಳ ಹಿಂದೆ ಬಿಡುಗಡೆಯಾದ ನೋಕಿಯಾ ಸಿ100, ನೋಕಿಯಾ ಸಿ200, ನೋಕಿಯಾ ಜಿ100 ಮತ್ತು ನೋಕಿಯಾ ಜಿ400 ಫೋನ್. ಇದಲ್ಲದೆ ಕಂಪನಿಯು ನೋಕಿಯಾ 2760 ಫ್ಲಿಪ್ ಹೆಸರಿನ 4ಜಿ ಫ್ಲಿಪ್ ಫೋನ್ ಸಹ ಬಿಡುಗಡೆ ಮಾಡಿದೆ. ಇದು ಉತ್ತಮ ವೈಶಿಷ್ಟ್ಯ ಹೊಂದಿರುವ ಹೊಸ ಫ್ಲಿಪ್ ನೋಕಿಯಾ ಮೊಬೈಲ್ ಫೋನ್ ಆಗಿದೆ.
ನೋಕಿಯಾ ಹಳೆ ನೆನಪನ್ನು ರಿಫ್ರೆಶ್ ಮಾಡಲು ಹೊಸ ಫ್ಲಿಪ್ ಫೋನ್ ಜಾರಿಗೆ ತಂದಿದೆ. 6 ಸಾವಿರ ರೂಪಾಯಿಗಳಿಗಿಂತ ಕಡಿಮೆ ಬೆಲೆಯಲ್ಲಿ ಎಲ್ಲಾ ಫೀಚರ್ಸ್ ಗಳಿರುವ ಈ ಫೋನಿಗೆ ನೋಕಿಯಾ 2760 ಫ್ಲಿಪ್ ಎಂದು ಹೆಸರಿಡಲಾಗಿದೆ. ಇದರಲ್ಲಿ 4ಜಿ ಎಲ್ಟಿಇ ಇನ್ಟರ್ನೆಟ್ ಸಪ್ಪೋರ್ಟ್ ಇದ್ದು KaiOS ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುತ್ತದೆ.
ಭಾರತದಲ್ಲಿ ನೋಕಿಯಾ 2760 ಫ್ಲಿಪ್ 4ಜಿ ಬೆಲೆ 8850-8900 ರೂಪಾಯಿ. ಫ್ಲಿಪ್ ಫೋನ್ ಭಾರತೀಯ ಮಾರುಕಟ್ಟೆಗೆ ಯಾವಾಗ ಬರಲಿದೆ ಎಂಬುದನ್ನು ಎಚ್ ಎಂಡಿ ಬಹಿರಂಗಪಡಿಸಿಲ್ಲ.
ಈ ಫೋನನ್ನು 55 ವರ್ಷಕ್ಕಿಂತ ಮೇಲ್ಪಟ್ಟವರಿಗಾಗಿ ಡಿಸೈನ್ ಮಾಡಲಾಗಿದೆ. 3 ಜಿಬಿ ರ್ಯಾಮ್ ಹಾಗೂ 32ಜಿಬಿ ಸ್ಟೋರೇಜ್ ನೀಡಲಾಗಿದೆ.