
ಚಿತ್ರದುರ್ಗದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹಿಂದೂ ಮಹಾಸಭಾ ಗಣಪತಿಯನ್ನು ಶನಿವಾರದಂದು ವಿಸರ್ಜನೆ ಮಾಡಲಾಗಿದ್ದು, ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್, ತಮ್ಮ ಹೆಲಿಕಾಪ್ಟರ್ ನಲ್ಲಿ ಗಣಪತಿ ಮೂರ್ತಿಗೆ ಪುಷ್ಪವೃಷ್ಟಿ ಮಾಡಿದ್ದಾರೆ.
ತಮ್ಮ ಪತ್ನಿ ಹಾಗೂ ಪುತ್ರನ ಜೊತೆ ಆಗಮಿಸಿದ್ದ ಅವರು, ಇದೇ ಸಂದರ್ಭದಲ್ಲಿ ಗಣಪತಿಗೆ ಹಾಕಿದ್ದ ಸೇಬು ಹಾರವನ್ನು 2 ಲಕ್ಷ ರೂಪಾಯಿಗಳಿಗೆ ಹರಾಜು ಕೂಗಿ ಫಲಪ್ರಸಾದ ಸ್ವೀಕರಿಸಿದ್ದಾರೆ. ಜೊತೆಗೆ ಮಹಾರಾಷ್ಟ್ರದ ಪುಣೆಯಿಂದ ಕರೆಸಲಾಗಿದ್ದ ನಾಸಿಕ್ ಡೋಲು ವಾದ್ಯಕ್ಕೆ ಚಾಲನೆ ನೀಡಿದ್ದಾರೆ.
ಮೆರವಣಿಗೆ ವೇಳೆ ತಮ್ಮ ಪುತ್ರನ ಜೊತೆ ಡೋಲು ವಾದ್ಯಕ್ಕೆ ರಘು ಆಚಾರ್ ಹೆಜ್ಜೆ ಹಾಕುವ ಮೂಲಕ ಎಲ್ಲರ ಗಮನ ಸೆಳೆದಿದ್ದು, ಮದಕರಿ ನಾಯಕ ವೃತ್ತದ ಬಳಿ ಗಣಪತಿ ಮೂರ್ತಿಗೆ ಹೆಲಿಕಾಪ್ಟರ್ ನಲ್ಲಿ ಪುಷ್ಪವೃಷ್ಟಿ ಮಾಡಿದ ನಂತರ ಅಂಬೇಡ್ಕರ್ ಹಾಗೂ ಮದಕರಿ ನಾಯಕ ಪ್ರತಿಮೆಗಳಿಗೂ ಹೂ ಮಳೆಗರೆದಿದ್ದಾರೆ.