
ಹುಬ್ಬಳ್ಳಿ: ಹಿಟ್ & ರನ್ ಗೆ ಇಬ್ಬರು ಬೈಕ್ ಸವಾರರು ಬಲಿಯಾಗಿರುವ ಘಟನೆ ಹುಬ್ಬಳ್ಳಿಯ ಹೊರವಲಯದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಆನಂದ್ (34) ಹಾಗೂ ಈರನ್ನ ಬಡಿಗೇರ (36) ಮೃತ ದುರ್ದೈವಿಗಳು. ಮೃತರು ಕಲಘಟಗಿ ತಾಲೂಕಿನ ಆಸ್ತಕಟ್ಟೆ ನಿವಾಸಿಗಳು ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಹುಬ್ಬಳ್ಳಿ ದಕ್ಷಿಣ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.