ಚಿಕ್ಕಮಗಳೂರು : ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಯನಟ ಚಂದ್ರಪ್ರಭಾ ಚಿಕ್ಕಮಗಳೂರು ಸಂಚಾರಿ ಠಾಣೆಗೆ ಹಾಜರಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಬಳಿ ಮಾಲ್ತೇಶ್ ಎಂಬ ಬೈಕ್ ಸವಾರನಿಗೆ ಚಂದ್ರಪ್ರಭಾ ಕಾರು ಡಿಕ್ಕಿ ಹೊಡೆದಿತ್ತು, ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಚಂದ್ರಪ್ರಭಾ ಅವರು ಹಿಟ್ & ರನ್ ಮಾಡಿ ಪರಾರಿ ಆಗಿದ್ದಾರೆ ಎಂದು ಆರೋಪ ಮಾಡಲಾಗಿತ್ತು.
ಈ ಹಿನ್ನೆಲೆ ಠಾಣೆಗೆ ಬರುವಂತೆ ಪೊಲೀಸರು ಚಂದ್ರಪ್ರಭಾಗೆ ಸೂಚನೆ ನೀಡಿದ್ದರು. ಅಂತೆಯೇ ಇಂದು ನಟ ಚಿಕ್ಕಮಗಳೂರು ನಗರ ಸಂಚಾರಿ ಠಾಣೆಗೆ ಹಾಜರಾಗಿದ್ದಾರೆ.
ಚಂದ್ರಪ್ರಭಾ ಕಾರು ಬೈಕ್ ಸವಾರನಿಗೆ ಡಿಕ್ಕಿ ಹೊಡೆಯಿತು, ಆದರೆ ಚಂದ್ರಪ್ರಭಾ ಕಾರಿನಿಂದ ಇಳಿಯಲೇ ಇಲ್ಲಾ, ನಾನೇ ಗಾಯಾಳು ಬೈಕ್ ಸವಾರ ಮಾಲ್ತೇಶ್ ನನ್ನು ಆಸ್ಪತ್ರೆಗೆ ದಾಖಲಿಸಿದೆ ಎಂದು ಆಟೋ ಚಾಲಕ ರಂಗನಾಥ್ ಹೇಳಿದ್ದರು. ಈ ಸಂಬಂಧ ಚಿಕ್ಕಮಗಳೂರು ನಗರದ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.