ಕೊಲ್ಕೊತ್ತಾ: ಮಾರ್ಚ್ 7 ರಂದು ಮಧ್ಯರಾತ್ರಿ 2 ಗಂಟೆಗೆ ವಿಧಾನಸಭೆಯ ಅಧಿವೇಶನ ಸೇರುವಂತೆ ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ಸೂಚನೆ ನೀಡಿದ್ದು, ಎಲ್ಲರ ಹುಬ್ಬೇರುವಂತೆ ಮಾಡಿದೆ.
ತುರ್ತು ಸಂದರ್ಭ ಹೊರತಾಗಿ ಮಧ್ಯರಾತ್ರಿಯಲ್ಲಿ ಅಧಿವೇಶನ ನಡೆಸುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ರಾಜ್ಯಪಾಲ ಜಗದೀಪ್ ಧನಕರ್ ಅವರ ನಡುವೆ ಸಂಘರ್ಷ ನಡೆಯುತ್ತಿದೆ. ಅದರ ಮುಂದುವರೆದ ಭಾಗ ಇದಾಗಿದೆ ಎನ್ನಲಾಗಿದೆ.
ನಾನು ಮಧ್ಯರಾತ್ರಿ ಅಧಿವೇಶನ ಕರೆದಿಲ್ಲ. ರಾಜ್ಯ ಸಚಿವ ಸಂಪುಟ ಶಿಫಾರಸು ಮಾಡಿರುವಂತೆ ಮಾರ್ಚ್ 7 ರಂದು ರಾತ್ರಿ 2 ಗಂಟೆಗೆ ಪಶ್ಚಿಮಬಂಗಾಳ ವಿಧಾನಸಭೆ ಅಧಿವೇಶನ ಆರಂಭವಾಗಲಿ ಎಂದು ರಾಜ್ಯಪಾಲರು ಹೇಳಿದ್ದಾರೆ. ಅಪರಾತ್ರಿ ಹೊತ್ತಲ್ಲಿ ಅಧಿವೇಶನ ಕರೆದಿರುವುದಕ್ಕೆ ವಿರೋಧ ವ್ಯಕ್ತವಾಗಿದೆ.