ನವದೆಹಲಿ: ಅತ್ಯಂತ ಕಿರಿಯ ವಯಸ್ಸಿಗೆ ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ. 18 ವರ್ಷದ ಗುಕೇಶ್ ಚಾಂಪಿಯನ್ ಆಗಿದ್ದಾರೆ.
ಭಾರತದ 18 ವರ್ಷದ ಗುಕೇಶ್ ಅತ್ಯಂತ ಕಿರಿಯ ವಯಸ್ಸಿಗೆ ವಿಶ್ವ ಚೆಸ್ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ವಿಶ್ವನಾಥನ ಆನಂದ್ ಅವರ ಬಳಿಕ ಎರಡನೇ ಬಾರಿಗೆ ಭಾರತಕ್ಕೆ ಚಾಂಪಿಯನ್ ಪಟ್ಟ ದೊರೆತಿದೆ.
ಡಿಂಗ್ ಲಿರೆನ್‌ನ ಕೊನೆಯ ಪ್ರಮಾದದ ನಂತರ ಗುಕೇಶ್ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಆಗಿ ಇತಿಹಾಸ ನಿರ್ಮಿಸಿದರು.
ಗುರುವಾರ ಸಿಂಗಾಪುರದಲ್ಲಿ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನ ನಿರ್ಣಾಯಕ ಗೇಮ್ 14 ರಲ್ಲಿ ಗುಕೇಶ್ ದೊಮ್ಮರಾಜು ಡಿಂಗ್ ಲಿರೆನ್ ಅವರನ್ನು ಸೋಲಿಸಿದರು. ಈ ಗೆಲುವಿನ ಮೂಲಕ ಗುಕೇಶ್ 18 ವರ್ಷ ವಯಸ್ಸಿನಲ್ಲೇ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಆದರು. ಈ ಡಿಸೈಡ್‌ನಲ್ಲಿ ಗುಕೇಶ್ ಕಪ್ಪು ಮತ್ತು ಲಿರೆನ್ ಬಿಳಿಯಾಗಿದ್ದರು,
ಸುದೀರ್ಘ ವಿರಾಮದ ನಂತರ, ಗುಕೇಶ್ ಅಂತಿಮವಾಗಿ ತನ್ನ ಬಿಷಪ್ ಅನ್ನು 13 ನೇ ನಡೆಯಲ್ಲಿ ಹಿಮ್ಮೆಟ್ಟಿಸಿದರು,
Gukesh D wins the 2024 FIDE World Championship, becomes the youngest world champion in history.
(Pic: International Chess Federation (FIDE)/X) pic.twitter.com/aJ1urZMR8e
— ANI (@ANI) December 12, 2024