ಕೊರೊನಾ ಲಾಕ್ ಡೌನ್ ನಿಂದಾಗಿ ರೆಸ್ಟೋರೆಂಟ್ ಗಳು ಬಾಗಿಲು ಮುಚ್ಚಿದ್ದವು. ಅನೇಕರು ಕೆಲಸ ಕಳೆದುಕೊಂಡಿದ್ದರು. ಲಾಕ್ ಡೌನ್ ಮುಗಿಯುತ್ತಿದ್ದಂತೆ ಮತ್ತೆ ರೆಸ್ಟೋರೆಂಟ್ ತೆರೆಯಲು ಶುರುವಾಗಿತ್ತು. ಸಿಬ್ಬಂದಿ, ಗ್ರಾಹಕರನ್ನು ಸೆಳೆಯಲು ಹಗಲು ರಾತ್ರಿ ದುಡಿದಿದ್ದಾರೆ. ಗ್ರಾಹಕರಿಗೆ ಮಾತ್ರವಲ್ಲ ಸಿಬ್ಬಂದಿಗೂ ಮಾನಸಿಕ ನೆಮ್ಮದಿ ಅವಶ್ಯಕತೆಯಿದೆ. ಇದನ್ನು ಅರಿತ ಲೂಯಿಸ್ವಿಲ್ಲೆ ರೆಸ್ಟೋರೆಂಟ್ ಮಾಲೀಕರು,ಸಿಬ್ಬಂದಿ ಮನಸ್ಸು ಗೆದ್ದಿದ್ದಾರೆ. ರೆಸ್ಟೋರೆಂಟ್ ಸಿಬ್ಬಂದಿಯನ್ನು ಲಾಸ್ ವೆಗಾಸ್ ಪ್ರವಾಸಕ್ಕೆ ಕಳುಹಿಸಿದ್ದಾರೆ.
ಜಪಾನ್ ನ ಈ ರೆಸ್ಟೋರೆಂಟ್ ಹೆಸರು Ramen House. ಇದ್ರ ಮಾಲೀಕ ಉದ್ಯೋಗಿಗಳಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ಅದ್ರ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಎಲ್ಲ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿದ್ದಾರೆ. ಒಂದು ವಾರ ರೆಸ್ಟೋರೆಂಟ್ ಗೆ ರಜಾ ನೀಡಿ ಸಿಬ್ಬಂದಿಯನ್ನು ಪ್ರವಾಸಕ್ಕೆ ಕರೆದೊಯ್ದಿದ್ದಾನೆ.
ಒಂದು ಡಜನ್ ಉದ್ಯೋಗಿಗಳು ಪ್ರವಾಸಕ್ಕೆ ತೆರಳಿದ್ದಾರೆ. ಪ್ರವಾಸಕ್ಕೆ ಹೋಗದ ಸಿಬ್ಬಂದಿಗೆ ಬೋನಸ್ ಘೋಷಣೆ ಮಾಡಿದ್ದಾನೆ. ಕ್ಷಮಿಸಿ ಒಂದು ವಾರಗಳ ಕಾಲ ರೆಸ್ಟೋರೆಂಟ್ ಮುಚ್ಚಿರಲಿದೆ ಎಂದು ಅವರು ಹೇಳಿದ್ದಾರೆ.