
ಪ್ರೀತಿಯಲ್ಲಿ ಅನೇಕರು ಮೋಸ ಮಾಡ್ತಾರೆ. ಒಂದೇ ಬಾರಿ ಇಬ್ಬರು ಹುಡುಗಿಯರನ್ನು ಪ್ರೀತಿಸುವವರಿದ್ದಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ಒಂದಲ್ಲ ಎರಡಲ್ಲ ಸ್ವಾಮಿ 85 ಹುಡುಗಿಯರ ಜೊತೆ ಫ್ಲರ್ಟ್ ಮಾಡಲು ಪ್ರಯತ್ನಿಸಿದ್ದಾನೆ. ಈ ಸತ್ಯವನ್ನು ಆತನ ಗರ್ಲ್ ಫ್ರೆಂಡ್ ಹೊರಗಿಟ್ಟಿದ್ದಾಳೆ.
ಆಕೆ ಹೆಸರು ಟೋರಿ. ಅಮೆರಿಕಾದ ಮಹಿಳೆ. ಟಿಕ್ ಟಾಕ್ ನಲ್ಲಿ ತನ್ನ ಬಾಯ್ ಫ್ರೆಂಡ್ ಹೇಗೆ ಮೋಸ ಮಾಡಲು ಮುಂದಾಗಿದ್ದ ಎಂಬುದನ್ನು ಹೇಳಿದ್ದಾಳೆ. ಮೊದಲು ಬಾಯ್ ಫ್ರೆಂಡ್ ಮೊಬೈಲ್ ನಲ್ಲಿ ಆಕೆ ಡೇಟಿಂಗ್ ಅಪ್ಲಿಕೇಷನ್ ನೋಡಿದ್ದಾಳೆ. ನಂತ್ರ ಅದ್ರಲ್ಲೇನಿದೆ ಎಂಬ ಕುತೂಹಲ ಮೂಡಿದೆ. ಹಾಗಾಗಿ ಅಪ್ಲಿಕೇಷನ್ ಓಪನ್ ಮಾಡಿದ್ದಾಳೆ. ಆಗ ಪ್ರೇಮಿ ಬಣ್ಣ ಬಯಲಾಗಿದೆ.
ಡೇಟಿಂಗ್ ಅಪ್ಲಿಕೇಷನ್ ನಲ್ಲಿ 85 ಮಹಿಳೆಯರಿಗೆ ಬಾಯ್ ಫ್ರೆಂಡ್ ಮೆಸ್ಸೇಜ್ ಕಳುಹಿಸಿದ್ದಾನೆ. ಎಲ್ಲರಿಗೂ ಒಂದೇ ಮೆಸ್ಸೇಜ್ ಫಾರ್ವರ್ಡ್ ಮಾಡಿದ್ದಾನೆ. ಆದ್ರೆ ಆ ಕಡೆಯಿಂದ ಯಾವುದೇ ಮಹಿಳೆ ಪ್ರತಿಕ್ರಿಯೆ ನೀಡಿಲ್ಲ. ಎಲ್ಲರಿಗೂ ಹಾಯ್ ಎಂದು ಸಂದೇಶ ಕಳುಹಿಸಿದ್ದಾನಂತೆ.
ಈತ ನನಗೆ ಮೋಸ ಮಾಡಲು ಪ್ರಯತ್ನಿಸಿದ್ದ. ಆದ್ರೆ ಯಾವುದೇ ಹುಡುಗಿ ಪ್ರತಿಕ್ರಿಯೆ ನೀಡಲಿಲ್ಲ ಎಂದು ಟೋರಿ ಹೇಳಿದ್ದಾಳೆ. ಅಷ್ಟೇ ಅಲ್ಲ ತನಗೆ ಮೋಸ ಮಾಡಲು ಮುಂದಾಗಿದ್ದ ಆತನ ಮೇಲೆ ಪ್ರೀತಿಯಿಲ್ಲ. ನಮ್ಮಿಬ್ಬರ ಸಂಬಂಧವನ್ನು ಅಂತ್ಯಗೊಳಿಸುತ್ತಿದ್ದೇನೆಂದು ಹೇಳಿದ್ದಾಳೆ.